ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿ: ಎಬಿವಿಪಿ ಆಗ್ರಹ

0
15
loading...

ಕನ್ನಡಮ್ಮ ಸುದ್ದಿ- ಹಾನಗಲ್ಲ : ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಎಬಿವಿಪಿ ವತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಬಳಿಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾದ ಮನವಿಯಲ್ಲಿ ಕಳೇದ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವ್ಯವಸ್ಥೆಯನ್ನು ಮತ್ತೆ ಮುಂದುವರೆಸಬೇಕು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಲಾಗಿದೆ.

ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೆಲಹೊತ್ತು ಗಾಂಧಿವೃತ್ತದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಬಳಿಕ ತಹಶೀಲ್ದಾರ್ ಕಛೇರಿಗೆ ಆಗಮಿಸಿ ಮನವಿಪತ್ರ ಸಲ್ಲಿಸಿದರು. ಎಬಿವಿಪಿ ಪ್ರಮುಖರಾದ ಬಸವರಾಜ ಆಲದಕಟ್ಟಿ, ಭರತ ಹುಳ್ಳಿಕಾಶಿ, ಸಚೀನ್, ಸಂಜು ಬಾರ್ಕಿ, ಪುಟ್ಟು ಹುಳ್ಳಿಕಾಶಿ, ಕಿರಣ ಬೇವಿನಮರದ ನೇತೃತ್ವ ವಹಿಸಿದ್ದರು.

loading...