ಒಳಿತಿನ ಹಂಬಲವೇ ಸಂಸ್ಕೃತಿ: ಸಿದ್ಧರಾಜ

0
8
loading...

 

ಬಾಗಲಕೋಟ ೨೮: ಜೀವನ ಪವಿತ್ರ ಭೂಮಿ. ಪ್ರಿÃತಿ, ಪ್ರೆÃಮ, ತ್ಯಾಗ, ಅನುಕಂಪದೊಂದಿಗೆ ಮಾನವೀಯ ಗುಣ ರೂಪಿಸಿಕೊಳ್ಳಬೇಕು ಎಂದು ಸಾಹಿಸಿ ಸಿದ್ಧರಾಜ ಪೂಜಾರಿ ತಿಳಿಸಿದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬವಿವ ಸಂಘದ ಪಾಲಿಟೆಕ್ನಿಕ್‌ನಲ್ಲಿ ಲಿಂಗೈಕ್ಯಹ ಸುವರ್ಣ ಬದಾಮಿ ಹಾಗೂ ಲಿಂಗಪ್ಪ ಬದಾಮಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜೀವನ ಮತ್ತು ಸಂಸ್ಕೃತಿ ವಿಷಯ ಕುರಿತು ಅವರು ಮಾತನಾಡಿದರು. ಸಂಸ್ಕೃತಿಯು ಕುಟುಂಬದಿಂದ ಪ್ರಾಪ್ತವಾಗುತ್ತದೆ. ಸಂಗದಿಂದ ಬೆಳೆಯುತ್ತದೆ. ಜೀವನವು ಒಂದು ಪವಿತ್ರ ಕರ್ಮಭೂಮಿ, ಇಲ್ಲಿ ಪ್ರಿÃತಿ, ಪ್ರೆÃಮ, ತ್ಯಾಗ, ಅನುಕಂಪ ಮೊದಲಾದ ಮಾನವೀಯ ಗುಣಗಳನ್ನು ರೂಪಿಸಿಕೊಂಡು ಬದುಕು ಸಾಗಿಸಿದಾಗ ವ್ಯಕ್ತಿ ಸುಸಂಸ್ಕೃತನೆನ್ನಿಸುತ್ತಾನೆ. ಶರಣರು ಇಂಥ ಉತ್ತಮ ಸಂಸ್ಕೃತಿಯ ಹರಿಕಾರರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಅಪಮೌಲ್ಯಗಳ ವೈಭವೀಕರಣ ನಡೆಯುತ್ತಿರುವದು ವಿಷಾದನೀಯ. ಉತ್ತಮ ಸಂಸ್ಕಾರಯುತನು ಎಲ್ಲೆಡೆ ಗೌರವಿಸಲ್ಪಡುತ್ತಾನೆ. ಅನುಭವದಿಂದ ಪಡೆದ ಜ್ಞಾನದ ಅನುಷ್ಠಾನದಿಂದ ಮನುಷ್ಯ ಸುಸಂಸ್ಕೃತನಾಗಬಲ್ಲ ಎಂದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ ಪ್ರಾಸ್ತಾವಿಕ ಮಾತನಾಡಿದರು.
ಡಾ.ಎಸ್.ಕೆ.ಬಂಗಾರಿ, ರಾಜೇಶ್ವರಿ ಶೆಟ್ಟರ, ಪ್ರೊ.ಆರ್.ಎಲ್.ಬದಾಮಿ, ಮಹಾಂತೇಶ ಕರಬಾಶೆಟ್ಟಿ, ಗೀತಾ ದಾನಶೆಟ್ಟಿ, ತಾಲೂಕಾ ಅಧ್ಯಕ್ಷ ಬಸವರಾಜ ಮುಕ್ಕುಪ್ಪಿ, ಶಿಕ್ಷಕಿ ಸುಮಂಗಲಾ ಬದಾಮಿ ಇತರರು ಇದ್ದರು.

loading...