ಒಳ್ಳೆಯ ಶಿಕ್ಷಣ ನೀಡುವುದು ಭವ್ಯ ಭಾರತ ಕಟ್ಟುವ ಕೆಲಸ: ದಂಡಿನ

0
7
loading...

ಕನ್ನಡಮ್ಮ ಸುದ್ದಿ-ಮುಧೋಳ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಕೆಲಸ ಅತ್ಯಂತ ಶ್ರೇಷ್ಠವಾದದ್ದು. ಇದು ಭವ್ಯ ರಾಷ್ಟ್ರ ಕಟ್ಟುವ ಕೆಲ¸.À ಈ ಕಾರ್ಯವನ್ನು ಬಾಗಲಕೋಟೆಯ ನವನಗರದ ಎಂ.ಆರ್‌.ಎನ್‌ ನಿರಾಣಿ ಉದ್ಯಮ ಸಮೂಹದ ಶ್ರೇಯಸ್ಸ ಸ್ಕೂಲ ಚನ್ನಾಗಿ ಮಾಡುತ್ತಿದೆ ಎಂದು ತೋಟಗಾರಿಕೆಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್‌.ಬಿ. ದಂಡಿನ ಹೇಳಿದರು.
ಅವರು ಇಂದು ಬಾಗಲಕೋಟೆಯ ನವನಗರದ ಎಂ.ಆರ್‌.ಎನ್‌ ನಿರಾಣಿ ಉದ್ಯಮ ಸಮೂಹದ ಶ್ರೇಯಸ್ಸ ಸ್ಕೂಲಿಗೆ ಭೇಟಿ ನೀಡಿ ಅಲ್ಲಿಯ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ ನೆಹರು ಅವರು ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಲು ಶಾಲೆಗಳನ್ನು ಸ್ಥಾಪಿಸಿರಿ ಜನರ ಆರೋಗ್ಯ ಕಾಪಾಡಲು ಆಸ್ಪತ್ರೆಗಳನ್ನು ಕಟ್ಟಬೇಕು ಎಂದು ಹೇಳುತ್ತಿದ್ದರು. ನೆಹರು ಅವರ ಆದರ್ಶ ವಿಚಾರಗಳನ್ನು ನಿರಾಣಿ ಉದ್ಯಮ ಸಮೂಹ ಕಾರ್ಯ ರೂಪಕ್ಕೆ ತಂದಿದೆ. ಬಾಗಲಕೋಟ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಒಳ್ಳೆಯ ಗುಣಮಟ್ಟದ ಶಾಲೆಯನ್ನು ನಿರ್ಮಿಸಿದೆ. ಎಂ. ಆರ್‌. ಎನ್‌ ನಿರಾಣಿ ಫೌಂಡೇಶನ್‌ ಜನರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ಸೇವೆ ಸಲ್ಲಿಸುತ್ತಿರುವುದ ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಹನುಮಂತ ಆರ್‌ ನಿರಾಣಿ ಮಾತನಾಡಿ ಡಾ. ಎಸ್‌.ಬಿ. ದಂಡಿನ ಅವರ ಮಾರ್ಗದರ್ಶನದಲ್ಲಿ ಶ್ರೇಯಸ್ಸ ಸ್ಕೂಲ ಸ್ಥಾಪಿಸಲಾಗಿದೆ. ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಶ್ರೇಯಸ್ಸ ಸ್ಕೂಲನ್ನು ವಿಶ್ವವಿದ್ಯಾಲಯವಾಗಿ ರೂಪಿಸುವ ಉದ್ದೇಶ ಆಡಳಿತ ಮಂಡಳಿ ಹೊಂದಿದೆ ಎಂದು ನಿರಾಣಿ ಹೇಳಿದರು. ಡಾ. ಎಸ್‌.ಬಿ. ದಂಡಿನ ಅವರು ಅಂತರಾಷ್ಟ್ರೀಯ ಖ್ಯಾತ ಕೃಷಿ ವಿಜ್ಞಾನಿ ಅವರು ಬಾಗಲಕೋಟೆಯ ತೋಟಗಾರಿಕೆಯ ವಿಶ್ವವಿದ್ಯಾಲಯ ಮೊದಲು ಕುಲಪತಿಯಾಗಿ ಭವ್ಯ ವಿಶ್ವವಿದ್ಯಾಲಯವನ್ನು ಕಟ್ಟಿದ್ದಾರೆ. ಸಿರಿಧಾನ್ಯ ಬೆಳೆಯುವುದು ಮತ್ತು ಅವುಗಳ ಸೇವನೆಯ ಮಹತ್ವ ಕುರಿತು ಸುಮಾರು ಮೂರು ದಶಕಗಳಿಂದ ಅವರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ನೆವಣಿ ಸಿರಿಧಾನ್ಯ ಬೇಸಾಯ ಕುರಿತು ಅವರು ಮಂಡಿಸಿದ ಪಿ. ಎಚ್‌. ಡಿ ಪ್ರಬಂಧ ಚಿನ್ನದಕ್ಕೆ ಪದಕ ಲಭಿಸಿದೆ. ಅವರ ಸೇವೆಯನ್ನು ಕರ್ನಾಟಕ ಸರಕಾರ ಪಡೆಯಬೇಕು, ಡಾ. ದಂಡಿನ ಅವರ ಬದಕು ಮತ್ತು ಸಾಧನೆ ಕುರಿತು ಒಂದು ಪಾಠವನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಅದು ಮಕ್ಕಳಿಗೆ ದೊಡ್ಡ ಸ್ಫೂರ್ತಿಯನ್ನು ನೀಡುತ್ತದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ ಹೇಳಿದರು. ವೆಂಕಟೇಶ ಜಂಬಗಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯ ಅಮೀತ ಸಿಂಗ್‌ ವಂದಿಸಿದರು. ಯುವ ಬಿ.ಜೆ.ಪಿ ಧುರೀಣ ರಮೇಶ ಮೋರಟಗಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಎಸ್‌.ಬಿ. ದಂಡಿನ ಅವರನ್ನು ಸನ್ಮಾನಿಸಲಾಯಿತು.

loading...