ಕಣ್ಣು ಸಂರಕ್ಷಣೆಗೆ ನಾವು ಕಾಳಜಿ ತೆಗೆದುಕೊಳ್ಳಬೇಕು: ಡಾ. ಅರುಣ

0
15
loading...

ಸಿಂದಗಿ: ಮನುಷ್ಯನಿಗೆ ದೇಹದ ಎಲ್ಲಾ ಅಂಗಗಳಿಂದ ಮುಖ್ಯವಾದ ಅಂಗ ಕಣ್ಣು ಅವುಗಳ ಸಂರಕ್ಷಣೆಗೆ ನಾವು ಅತ್ಯಂತ ಸೂಕ್ಷö್ಮ ಕಾಳಜಿ ತೆಗೆದುಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಕಣ್ಣುಗಳು ಬಹುದಿನಗಳವರೆಗೆ ಆರೋಗ್ಯವಂತವಾಗಿರಲು ಸಾಧ್ಯ ಎಂದು ಮಲಘಾಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರುಣ ಬಿರಾದಾರ ಹೇಳಿದರು.
ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ಜುಲೈ ೩೧ ರಂದು ಜರಗಲಿರುವ ಸಿಂದಗಿ ತಾಲೂಕ ಐದನೆಯ ಕನ್ನಡ ಸಾಹಿತ್ಯ ಸಮ್ಮೆÃಳನದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ, ಶಸ್ತç ಚಿಕಿತ್ಸಾ ಮತ್ತು ರಕ್ತ ಧಾನ, ರಕ್ತ ಪರೀಕ್ಷೆ ಹಾಗೂ ಸಾಮಾನ್ಯ ರೋಗಿಗಳ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮ್ಮೆÃಳನದ ಪೂರ್ವಭಾವಿಯಾಗಿ ಇಂತಹ ಆರೋಗ್ಯ ಸಂಬಂಧಿ ಶಿಬಿರಗಳನ್ನು ಹಮ್ಮಿಕೊಂಡಿದ್ದು ಅತ್ಯಂತ ಸ್ತುತ್ಯಾರ್ಹ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಡಾ.ಸುಮಾ ಮಮದಾಪುರ, ಡಾ. ಶಶಿಧರ, ಡಾ. ಪ್ರಶಾಂತ ಪೋಲಿಸಪಾಟೀಲ ಸಿ.ಬಿ. ಚೆನ್ನಗೊಂಡ, ನೇತ್ರ ಅಧಿಕಾರಿ ಸುರೇಶ ಮಹೇಂದ್ರಕರ, ಎಸ್.ಬಿ. ಬಿರಾದಾರ, ರಮೇಶ ಪಡಸಲಗಿ, ವಿ.ಕೆ. ಜಂಬಗಿ, ಸಿ.ಎಮ್. ಡವಳಾಪೂರ, ಅನೀಲ ಜಾಧವ, ದತ್ತಾತ್ರೆÃಯ ಹೊಸಮಠ,  ಎಸ್.ಎಸ್. ದೊಡ್ಡಮನಿ, ಆರ್. ಎಚ್ ಶಿವಪೂರ, ಎಸ್.ಎಸ್ ಶಿವಪೂರ, ಎಸ್.ಎಮ್. ಬಡಿಗೇರ, ಸಂಜಯ ಹೊನಕೇರಿ, ರಾಜು ಕಾಂಬಳೆ ಆರೋಗ್ಯ ಶಿಬಿರದಲ್ಲಿ ಉಪಸ್ಥಿತರಿದ್ದರು.
ಕಸಾಪ ಸದಸ್ಯರಾದ ಗುಂಡಣ್ಣ ಕುಂಬಾರ, ಅಶೋಕ ಬಿರಾದಾರ, ಮಹಾಂತೇಶ ನೂಲಾನವರ, ಎಮ್.ಜಿ. ಯಂಕಂಚಿ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಸುಮಾರು ೩೦ ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು ಅದರಲ್ಲಿ ಮಾನಂದ ಹರಿಜನ, ಅತೀ ವಿರಳವಾಗಿ ದೊರಕುವ ಎ.ಬಿ ನೆಗೆಟಿವ್ ಗುಂಪಿನ ರಕ್ತವನ್ನು ದಾನ ಮಾಡಿದ್ದರಿಂದ ವಿಜಯಪುರ ಸರಕಾರಿ ಆಸ್ಪತ್ರೆಯಲ್ಲಿನ ಒಬ್ಬ ರೋಗಿಯು ಪ್ರಾಣಾಪಾಯದಿಂದ ಪಾರಾಗಲು ಸಹಕಾರಿಯಾಯಿತು. ಇನ್ನು ಅನೇಕ ಸಾಮಾನ್ಯ ರೋಗಿಗಳಿಗೆ ಬಿ.ಪಿ, ಶುಗರ್, ಇತರೆ ಖಾಯಿಲೆಗಳಿಗೆ ತಪಾಸಣೆ ಮಾಡಿ ಔಷದ ನೀಡಿ ಉಪಚರಿಸಿದರು. ಹಾಗೂ ೪೦೦ ರೋಗಿಗಳಿಗೆ ಕಣ್ಣು ತಪಾಸಣೆ ಮಾಡಿ ಕಣ್ಣ ಪೊರೆ ಬಂದಿರುವ ೫೦ ರೋಗಿಗಳಿಗೆ ಉಚಿತವಾಗಿ ಶಸ್ತç ಚಿಕಿತ್ಸೆಗೆ ಗುರುತಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ಸ್ವಾಗತಿಸಿ ನಿರೂಪಿಸಿದರು. ಮಾಧ್ಯಮ ಪ್ರತಿನಿಧಿ ಆನಂದ ಶಾಬಾದಿ ವಂದಿಸಿದರು,

loading...