ಕಮಾಲಾಕರ ಹೇಳಿಕೆಗೆ ತಿರುಗೇಟು ಪರೇಶನ ಸಾವನ್ನು ಸಹಜ ಸಾವೆಂದು ಹೇಳಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ

0
13
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಕಳೆದ ಡಿ.6 ರಂದು ಹೊನ್ನಾವರದಲ್ಲಿ ನಡೆದ ಎರಡು ಕೋಮುಗಳ ಘರ್ಷಣೆಯ ಸಂದರ್ಭದಲ್ಲಿ ನಗರದ ಶೆಟ್ಟಿಕೆರೆಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಸಿಕ್ಕ ಪರೇಶನ ಶವ ಸಹಜ ಸಾವೆಂದು ತೀರ್ಮಾನಿಸಲು ಕಾಂಗ್ರೆಸ್ಸಿಗರ್ಯಾರು ವೈದ್ಯಾಧಿಕಾರಿಗಳಲ್ಲಾ ಎಂದು ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ಎನ್‌.ತೆಂಗೇರಿ ಹೇಳಿದ್ದಾರೆ.
ಅವರು ಇಂದು ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ ಕಾಂಗ್ರೆಸ್ಸಿಗರು ಇತ್ತೀಚೆಗೆ ಕೈಗೊಂಡ ಉಪವಾಸ ಸತ್ಯಾಗ್ರಹ ಸೋಗಲಾಡಿತನದ್ದು ಎಂದು ನೀಡಿದ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದ್ದಾರೆ. ಡಿ.8 ರಂದು ಪರೇಶನ ಶವ ಸಂಶಯಾಸ್ಪದ ರೀತಿಯಲ್ಲಿ ಸಿಕ್ಕ ನಂತರ ಭಾರತೀಯ ಜನತಾ ಪಕ್ಷದ ರಾಜ್ಯ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ವೈದ್ಯಾಧಿಕಾರಿಗಳು ಶವ ಪರೀಕ್ಷೇ ಮಾಡುವುದು ಬೇಡಾ, ಮಣಿಪಾಲದ ತಜ್ಞ ವೈದ್ಯರು ಮಾಡಬೇಕೆಂದಾಗ ಅದೇ ರೀತಿ ಮಾಡಲಾಯಿತು.
ಕರ್ನಾಟಕ ಸರಕಾರ ಮತ್ತು ಕರ್ನಾಟಕ ಪೋಲಿಸ್‌ರ ಮೇಲೆ ನಮಗೆ ಭರವಸೆ ಇಲ್ಲದ ಕಾರಣ ಈ ಪ್ರಕರಣವನ್ನು ಸಿ.ಬಿ.ಐ ಗೆ ಕೊಟ್ಟಲ್ಲಿ ಒಂದು ವಾರದಲ್ಲಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಕರ್ನಾಟಕ ಕಾಂಗ್ರೇಸ್‌ ಸರಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಕೇಂದ್ರ ಸರಕಾರದ ಅಧೀüನದಲ್ಲಿರುವ ಸಿ.ಬಿ.ಐ.ಗೆ ಪಕ್ರಣ ನೀಡಿರುವುದು ನ್ಯಾಯ ಸಮ್ಮತವಲ್ಲವೇ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೆಂಗೇರಿ ಪ್ರಶ್ನಿಸಿದ್ದಾರೆ. ಪರೇಶ ಮೇಸ್ತನ ಅಂತ್ಯ ಸಂಸ್ಕಾರ ನಡೆದ ರಾತ್ರಿಯೇ ದೂರದ ಬೆಂಗಳೂರಿನಿಂದ ಆಗಮಿಸಿದ ಸಚಿವ ಆರ್‌.ವಿ .ದೇಶಪಾಂಡೆ, ಅಂದಿನ ಶಾಸಕಿ ಶಾರದ ಶೆಟ್ಟಿ , ಶಾಸಕ ಮಂಕಾಳ ವೈದ್ಯ, ಪಟ್ಟಣ ಪಂಚಾಯತ್‌ ಉಪಾಧಕ್ಷೆ ಶರಾವತಿ ಮೇಸ್ತ ನಾನು ಮತ್ತು ಪಕ್ಷದ ಹಲವಾರು ಮುಖಂಡರು ಮೃತನ ಮನೆಗೆ ತೆರಳಿ ಸಾಂತ್ವನ ಹೇಳಿದೇವು. ಸಚಿವ ಆರ್‌. ವಿ. ದೇಶಾಪಾಂಡೆಯವರು ಮೃತನ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿ, ಮುಂದಿನ ದಿನದಲ್ಲಿ ಸರಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಮತ್ತು ಪರೇಶನ ಸಹೋದರಿಗೆ ಉದ್ಯೋಗ ಕೊಡಿಸುವುದಾಗಿ ಮತ್ತು ಪರೇಶ ಸಾವಿನ ತನಿಖೆಯನ್ನು ಪಾರದರ್ಶಕವಾಗಿ ನಡೆಸುವ ಭರವಸೆ ನೀಡಿದ್ದರು. ಆದರೆ ಕಮಲಾಕರ ಮೇಸ್ತ ಎರಡೇ ದಿನದಲ್ಲಿ ಬದಲಾಗಿ ಯಾರದೋ ಒತ್ತಡಕ್ಕೆ ಮಣಿದು ಪತ್ರಿಕಾಗೋಷ್ಠಿ ಕರೆದು ಕಾಂಗ್ರೇಸ್‌ ಸರಕಾರದ ಯಾವ ಪರಿಹಾರವು ನಮಗೆ ಬೇಡ. ನನ್ನ ಕುಟುಂಬಕ್ಕೆ ಸರಕಾರ ನೀಡುವ ಉಧ್ಯೋಗವಾಗಲಿ, ಯಾವುದೇ ಪರಿಹಾರದ ಭೀಕ್ಷೇ ಬೇಡ ಅಂತಾ ಘೋಷಿಸಿದರು.ಇದು ನಮ್ಮ ಪಕ್ಷದ ಮುಖಂಡರಿಗೆ ಮಾಡುವ ಅವಮಾನ ಅಲ್ಲವೇ ? ರಾಜ್ಯ ಸರಕಾರ ಸಿ.ಬಿ.ಐ.ಗೆ ಪ್ರಕರಣವನ್ನು ಕೊಟ್ಟ ಮೇಲೆ ಸಿ.ಬಿ.ಐ. ತನಿಖೆ ನಡೆಸಿ ಪಾರದರ್ಶಕ ವರದಿ ಸಲ್ಲಿಸುವುದು ಅವರ ಕರ್ತವ್ಯ. ಶವ ಪರೀಕ್ಷೇ ವರದಿ ಪಡೆಯುವ ಅಧಿಕಾರ ತನಿಖಾ ಸಂಸ್ಥೆಗೆ ಅಂದರೆ ಸಿ.ಬಿ.ಐ.ಗೆ ಮಾತ್ರ ಇರುತ್ತದೆ. ಇದರಲ್ಲಿ ಕರ್ನಾಟಕ ಸರಕಾರದ ಯಾವುದೇ ಪಾತ್ರ ಇರುವುದಿಲ್ಲ. ಕಾರಣ ಬ್ಲಾಕ್‌ ಕಾಂಗ್ರೇಸ್‌ ಪ್ರಾಮಾಣಿಕವಾಗಿ ಪರೇಶ ಮೇಸ್ತನ ಸಾವಿನ ನ್ಯಾಯ ಸಿಗಲು ಹೋರಾಡುತ್ತಿದೆ. ನಾವು ಸೋಗಲಾಡಿತನದ ಉಪವಾಸ ಮಾಡಿಲ್ಲ. ಪ್ರಾಮಾಣಿಕವಾಗಿ ದೇವರು ಮೆಚ್ಚುವ ರೀತಿಯಲ್ಲಿ ಉಪವಾಸ ನಡೆಸಿದ್ದೇವೆ. ಮುಂದಿನ ಹಂತದಲ್ಲಿಯೂ ಪ್ರಾಮಾಣಿಕವಾಗಿ ಹೊನ್ನಾವರ ಬ್ಲಾಕ್‌ ಕಾಂಗ್ರೇಸ್‌ ಪರೇಶನ ನಿಗೂಢ ಸಾವಿನ ನಾಯ್ಯಕ್ಕಾಗಿ ಹೋರಾಡುತ್ತದೆ. ನಮಗೆಲ್ಲಾ ಕಾಡುತ್ತಿರುವ ಪ್ರಶ್ನೆ ಇಷ್ಟೇ. ಬಿ.ಜೆ.ಪಿ ಮುಖಂಡರು ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಿ.ಬಿ.ಐ. ಗೆ ಕೊಟ್ಟಲ್ಲಿ 7 ದಿನದಲ್ಲಿ ನ್ಯಾಯ ಕೊಡಿಸುವುದಾಗಿ ಹೇಳಿದ್ದರು . ಆದರೆ 7 ತಿಂಗಳಾದರೂ ಈ ಬಗ್ಗೆ ಮಾತನಾಡುತ್ತಿಲ್ಲಾ. ಈ ಬಗ್ಗೆ ಭಾರತೀಯ ಜನಾತಾ ಪಕ್ಷದವರು ಮೌನವಾಗಿರುವುದೇಕೆ? ಅನ್ನುವುದೇ ನಮ್ಮ ಪ್ರಶ್ನೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

loading...