ಕರ್ನಾಟಕ ಏಕೀಕರಣಕ್ಕೆ ಮಹನೀಯರು ಹೋರಾಟ ಮಾಡಿದ್ದಾರೆ:ಉ.ಕ ಬಂದ್ ಮಾಡಬೇಡಿ:ವಿ.ಪ ನಾಯಕ ಬಿಎಸ್‍ವಾಯ್ ಮನವಿ

0
10
loading...

ಕರ್ನಾಟಕ ಏಕೀಕರಣಕ್ಕೆ ಮಹನೀಯರು ಹೋರಾಟ ಮಾಡಿದ್ದಾರೆ:ಉ.ಕ ಬಂದ್ ಮಾಡಬೇಡಿ:ವಿ.ಪ ನಾಯಕ ಬಿಎಸ್‍ವಾಯ್ ಮನವಿ

ಕನ್ನಡಮ್ಮ ಸುದ್ದಿ-ಬೆಳಗಾವಿ:ಅಖಂಡ ಕರ್ನಾಟಕದ ಬಗ್ಗೆ ಎಲ್ಲ ಭಾಗದ ಕವಿಗಳು,ಸಾಹಿತಿಗಳು ಕನ್ನಡ ಪರ ಸಂಘಟನೆಗಳು ದಶಕಗಳಿಂದ ಹೋರಾಟ ಮಾಡಿ ಗಳಿಸಿದ ಕರ್ನಾಟಕ ಏಕೀಕರಣವಾಗಿದೆ.ಅಭಿವೃದ್ಧಿಗಾಗಿ ಹೋರಾಟ ಮಾಡಿ ಪ್ರತ್ಯೇಕತೆ ಬೇಡ.ಉ.ಕ ಬಂದ್ ಮಾಡಬೇಡಿ ಎಂದು ವಿ.ಪ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಂಗಳವಾರ ನಗರದಲ್ಲಿ ಪ್ರತಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ಈ ಭಾಗ ಅಭಿವೃದ್ಧಿ ಬಗ್ಗೆ ಮಾತನಾಡದೆ ಸಿ.ಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಜನರ ಭಾವನೆಗಳಿಗೆ ದಕ್ಕೆ ತರುವ ಮಾತುಗಳನ್ನು ಆಡುತ್ತಿರವುದು ಸರಿಯಲ್ಲ.ಉತ್ತರ ಕರ್ನಾಟಕ ಪ್ರತ್ಯೇಕ ಕೂಗಿಗೆ ಸಿಎಂ ಕುಮಾರಸ್ವಾಮಿ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.
ಸುವರ್ಣಸೌಧ ಭೂತ ಬಂಗಲೆಯಾಗಿದೆ.ಪ್ರಮುಖ ಇಲಾಖೆ ಸ್ಥಳಾಂತರಿಸಬೇಕು ಎಂದು ಹೇಳಿದರು ಮುಖ್ಯಮಂತ್ರಿ ಕಾಳಜಿವಹಿಸದೆ ಉಡಾಫೆ ಮಾತುಗಳನ್ನು ಭಾಗದ ಜನರ ಬಗ್ಗೆ ಮಾತನಾಡುವುದು ಸರಿಯಲ್ಲ.
ಉತ್ತರ ಕರ್ನಾಟಕ ಪ್ರತ್ಯೇಕತೆ ಹೊರಾಟಗಾರರನ್ನು ಬೇಟಿಯಾಗಿ ಪ್ರತ್ಯೇಕತೆ ಬೇಡ ರಾಜ್ಯ ಒಡೆಯುವುದು ಸರಿಯಲ್ಲ ಎಂದು ಮುಖಂಡರಿಗೆ ಮನವಿ ಮಾಡಿಕೊಂಡರು.

loading...