ಕಲಾಪ ಬಹಿಷ್ಕಾರಕ್ಕೆ ಮುಂದಾದ ಬಿಜೆಪಿ

0
11
loading...

ಬೆಂಗಳೂರು: ಸಭಾಪತಿ ನೇಮಕ ವಿಚಾರ ಇವತ್ತು ವಿಧಾನ ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತ್ತಲ್ಲದೆ,ವಿಪಕ್ಷ ಸದಸ್ಯರ ಆಕ್ರೋಶಕ್ಕೆ ತುತ್ತಾಯಿತು.

ಬೆಳಿಗ್ಗೆ ಸದನ ಆರಂಭಗೊಂಡಾಗ ಹಂಗಾಮಿ ಸಭಾಪತಿ ನೇಮಕದ ವಿಚಾರದ ಬಗ್ಗೆ ಬಿಜೆಪಿ ಸದಸ್ಯರಾದ ಆಯನೂರು ಮಂಜುನಾಥ್,ತೇಜಸ್ವಿನ್ ಗೌಡ ಪ್ರಸ್ತಾಪಿಸಿದರು.

ಹಂಗಾಮಿ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿಯರಿಗೆ ಸದನ ನಡೆಸುವ ಅಧಿಕಾರವಿಲ್ಲ. ಅವರು ಮೊದಲು ಸಭಾಪತಿ ಚುನಾವಣೆ ನಡೆಸಬೇಕಿತ್ತು ಎಂಬುದಾಗಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆ ಎತ್ತಿದರಲ್ಲದೆ,ಈವರೆಗೂ ಯಾಕೆ ಸಭಾಪತಿ ಚುನಾವಣೆ ನಡೆಸಿಲ್ಲ.ಅಧಿವೇಶನದೊಳಗೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು.

ತಕ್ಷಣ ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್,ಸರ್ಕಾರಕ್ಕೆ ಸಭಾಪತಿ ಆಯ್ಕೆ ಬಗ್ಗೆ ಇಚ್ಛಾ ಶಕ್ತಿ ಇಲ್ಲವೋ ಅಥವಾ ಹೊಂದಾಣಿಕೆ ಇಲ್ಲವೋ ಎಂದು ಪ್ರಶ್ನಿಸಿದರು. ಹಿರಿಯರಾದ ಹೊರಟ್ಟಿಯವರೇ ನೀವು ಇಲ್ಲಿ ಕುಳಿತು ಮಾತನಾಡಬೇಕಿತ್ತು. ಹೀಗಾಗಿ ಪೀಠವನ್ನು ಹಂಗಾಮಿ ಅನ್ನೋದರಿಂದ ತೆರವುಗೊಳಿಸಿ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ,ಅಧಿವೇಶನ ಆರಂಭವಾದ ದಿನವೇ ಈ ಪ್ರಶ್ನೆ ಎತ್ತಬೇಕಿತ್ತು. ಅಲ್ಲದೆ, ಈವರೆಗೆ ನಡೆಸಿದ ಕಲಾಪವೂ ನಿಯಮಬಾಹಿರ ಎನ್ನಬಹುದು.ಸದನ ಒಪ್ಪದಿದ್ದರೆ ಸಭಾಪತಿ ಪೀಠದಿಂದ ಇಳಿಯುತ್ತೇನೆ ಎಂದು ಹೊರಟ್ಟಿ ಹೇಳುತ್ತಿದ್ದಂತೆ ಇಡೀ ಸದನ ಗಂಭೀರವಾಯಿತು.

ನಂತರ ಸರ್ಕಾರದ ಪರವಾಗಿ ತಕ್ಷಣ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ,ನಿಯಮ ಪ್ರಕಾರ ಸದನ ನಡೆಸುವ ಅಧಿಕಾರ ಹಂಗಾಮಿ ಸಭಾಪತಿಗಿದೆ.ಹಂಗಾಮಿ ಸಭಾಪತಿಗೆ ನಿಯಮದ ಮತ್ತು ಸಮಯದ ಇತಿಮಿತಿ ಇಲ್ಲ.ಈ ಬಗ್ಗೆ ಪ್ರಶ್ನಿಸುವ ಅವಕಾಶ ಸದನಕ್ಕೂ ಇಲ್ಲ.ಸಭಾಪತಿ ಚುನಾವಣೆ ಯಾವಾಗ ಎಂದು ಪ್ರತಿಪಕ್ಷ ಚರ್ಚೆ ಮಾಡಬಹುದು.ಅದಕ್ಕೆ ಸರ್ಕಾರ ಕೂಡಾ ಸಿದ್ದ ಎಂದು ಹೇಳಿದರು.

ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ.ಬಿ.ಶಾಣಪ್ಪ,`ಕೃಷ್ಣ ಬೈರೇಗೌಡ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಲಾಪ ಬಹಿಷ್ಕಾರಕ್ಕೆ ಮುಂದಾದರು.ಆಗ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಶಾಣಪ್ಪರನ್ನು ಕೈಹಿಡಿದು ತಡೆದರು.

ನಂತರ ಮತ್ತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ,ಈ ಅಧಿವೇಶನದೊಳಗೆ ಪರಿಷತ್‍ಗೆ ಸಭಾಪತಿ ನೇಮಿಸುತ್ತೇವೆ.ಸಭಾಪತಿ ಗಳ ಬಗ್ಗೆ ಯಾವುದೇ ಗೊಂದಲ ಬೇಡ,ಸಭಾಪತಿಗಳ ಹುದ್ದೆಗೆ ಚುನಾವಣೆ ನಡೆಯೋವರೆಗೂ,ರಾಜ್ಯಪಾರ ಆದೇಶದವರೆಗೂ ಇವರೇ ಸಭಾಪತಿಗಳಾಗಿರುತ್ತಾರೆ.ರಾಜ್ಯಪಾಲರು ಎಲ್ಲಿಯೂ ಹಂಗಾಮಿ ಅನ್ನೋ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡುವ ಈ ಮೂಲಕ ಸಭಾಪತಿಗಳ ವಿಚಾರವಾಗಿದ್ದ ಗೊಂದಲಗಳಿಗೆ ತೆರೆ ಎಳೆದರು.

ಈ ನಡುವೆ ಸಭಾನಾಯಕಿ ನೇಮಕ ವಿಚಾರದಲ್ಲಿ ಅಸಮಧಾನಗೊಂಡು ಕಳೆದ ನಾಲ್ಕು ದಿನಗಳಿಂದ ಕಲಾಪದಲ್ಲಿ ಮೌನವಹಿಸಿದ್ದ ಸದಸ್ಯ ವಿ.ಎಸ್.ಉಗ್ರಪ್ಪ ಅಧಿವೇಶನದಲ್ಲಿ ಮೊದಲ ಬಾರಿ ಚರ್ಚೆಯಲ್ಲಿ ಭಾಗವಹಿಸಿ ಹಂಗಾಮಿ ಸಭಾಪತಿಯ ಕಾರ್ಯವೈಖರಿ ಮತ್ತು ಅಧಿಕಾರ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾದ ಮಾಹಿತಿಯನ್ನು ಸದನಕ್ಕೆ ನೀಡಿದರು.

1984-85ರಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ  ಹಂಗಾಮಿ ಸಭಾಪತಿಯನ್ನ ಕೆಳಗಿಳಿಸಿದ್ದರು. ಆದರೆ ಸಭಾಪತಿ ಕಾರ್ಯನಿರ್ವಹಣೆ ಸರಿಯಾಗಿದೆ ಎಂದು ಹೇಳಿದರು.

loading...