ಕಲಿಯುಗ ಅಂತ್ಯಕ್ಕೆ ಕಾಲ ಸನ್ನಿಹಿತವಾಯಿತೇ..?

0
98
loading...

ನವದೆಹಲಿ- ಕಲಿಯುಗ ಅಂತ್ಯಕ್ಕೆ ಕಾಲ ಸನ್ನಿಹಿತವಾಯಿತೇ..? ಇದೇ 27ರಂದು ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ನಂತರ ಇಡೀ ಭೂ ಮಂಡಲ ನಶಿಸಿ ಹೋಗುವುದೇ..? ಇಂತಹ ಒಂದು ತರ್ಕ ಎಲ್ಲೆಡೆ ಕೇಳಿಬರುತ್ತಿದೆ. ಜುಲೈ ತಿಂಗಳಿನಲ್ಲೇ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣವಾಗುತ್ತಿರುವುದು ಹಾಗೂ ಮಂಗಳ ಗ್ರಹ ಭೂಮಿಯ ಅತ್ಯಂತ ಸಮೀಪಕ್ಕೆ ಬರುತ್ತಿರುವುದು ಕಲಿಯುಗದ ಅಂತ್ಯಕ್ಕೆ ಮುನ್ನುಡಿ ಎಂದು ಕೆಲವರು ಭಾವಿಸುತ್ತಿದ್ದಾರೆ.

ಆದರೆ, ಈ ಎಲ್ಲ ಘಟನೆಗಳೂ ಪ್ರಕೃತಿಯ ವಿಸ್ಮಯ. ಗ್ರಹಣದ ಸಂದರ್ಭದಲ್ಲಿ ಭೂಮಿಗೆ ಯಾವುದೇ ಆಪತ್ತು ಬರುವುದಿಲ್ಲ ಎಂದು ವಾದ ಮಂಡಿಸುತ್ತಿದ್ದಾರೆ ವಿಜ್ಞಾನಿಗಳು. ಇದೇ 13ರಂದು ಸೂರ್ಯ ಗ್ರಹಣವಾಗಲಿದ್ದು, 27ರಂದು ಚಂದ್ರ ಗ್ರಹಣವಾಗಲಿದೆ. ಚಂದ್ರ ಗ್ರಹಣದ ಸಂದರ್ಭದಲ್ಲಿ ಚಂದ್ರನ ಬಿಂಬ ರಕ್ತದಂತೆ ಕಂಡುಬರುವುದರಿಂದ ಅದನ್ನು ಬ್ಲಡ್‍ಮೂನ್ ಎಂದೇ ಕರೆಯಲಾಗುತ್ತಿದೆ.
ಬೈಬಲ್‍ನಲ್ಲಿ ಬ್ಲಡ್‍ಮೂನ್ ಕಂಡುಬಂದ ದಿನವೇ ಭೂಮಿಯ ಆಯಸ್ಸು ಪೂರ್ಣಗೊಳ್ಳಲಿದೆ ಎಂಬ ಅಂಶವಿರುವ ಹಿನ್ನೆಲೆಯಲ್ಲಿ ಇದೇ 27ರಂದು ಸಂಭವಿಸಲಿರುವ ಚಂದ್ರಗ್ರಹಣದ ನಂತರ ಭೂಮಿ ನಶಿಸಿಹೋಗಲಿದೆ.

ಚಂದ್ರ ಗ್ರಹಣದ ಸಂದರ್ಭದಲ್ಲೇ ಮಂಗಳ ಗ್ರಹ ಭೂಮಿಯ ಅತ್ಯಂತ ಸಮೀಪದಲ್ಲೇ ಹಾದು ಹೋಗುತ್ತಿರುವುದು ವಿನಾಶದ ಸಂಕೇತ. ಹೀಗಾಗಿ 27ರ ನಂತರ ಭೂಮಿ ನಾಶವಾದರೂ ಆಶ್ಚರ್ಯಪಡುವಂತಿಲ್ಲ ಎನ್ನುತ್ತಾರೆ ಅಮೆರಿಕದ ಪಾದ್ರಿ ಫೌಲ್ ಬೆಗ್ಲೆ ಅಭಿಪ್ರಾಯಪಟ್ಟಿದ್ದಾರೆ.
ಕಲಿಯುಗ ಅಂತ್ಯಗೊಂಡು ಎರಡನೆ ಏಸುಕ್ರಿಸ್ತ ಪುನರ್ ಅವತರಿಸಲು ಕಾಲ ಸನ್ನಿಹಿತವಾಗಿದೆ. ಹವಾಯಿ ದ್ವೀಪದಲ್ಲಿ ಜ್ವಾಲಾಮುಖಿ ಕಾಣಿಸಿಕೊಳ್ಳುತ್ತಿರುವುದು, ಮಂಗಳ ಗ್ರಹದಲ್ಲಿ ಧೂಳಿನ ಬಿರುಗಾಳಿ ಬೀಸುತ್ತಿರುವುದು, ಬ್ಲಡ್‍ಮೂನ್ ಕಾಣಿಸಿಕೊಳ್ಳುತ್ತಿರುವುದು ಭೂಮಿ ವಿನಾಶದ ಸಂಕೇತ ಎನ್ನುತ್ತಾರೆ ಬೇಗ್ಲೆ.
ನಾನು ಯಾರನ್ನೂ ಬೆದರಿಸಬೇಕು ಎಂದು ಇಂತಹ ಹೇಳಿಕೆ ನೀಡುತ್ತಿಲ್ಲ. ಬೈಬಲ್ ನೀಡಿರುವ ಭೂಮಿ ವಿನಾಶದ ಮುನ್ಸೂಚನೆಯನ್ನು ತಿಳಿಸುತ್ತಿದ್ದೇನೆ. ಭೂಮಿ ನಾಶವಾದ ನಂತರ ಸೂರ್ಯನಿಂದ ಜನಿಸುವ ಪ್ರಜ್ವಲಮಾನ ವ್ಯಕ್ತಿಯೊಬ್ಬ ಮೋಡದಿಂದ ಧರೆಗಿಳಿದು ಬಂದು ಮತ್ತೊಂದು ಯುಗಕ್ಕೆ ಮುನ್ನುಡಿ ಬರೆಯುತ್ತಾನೆ ಎನ್ನುವುದನ್ನು ಬೈಬಲ್‍ನಲ್ಲಿ ಉಲ್ಲೇಖಿಸಲಾಗಿದೆ. ಆ ಅಂಶವನ್ನೇ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ ಎನ್ನುವುದು ಬೇಗ್ಲೆ ವಾದವಾಗಿದೆ

loading...