ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿದ ಶ್ರೀಗಳು

0
6
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಗ್ರಾಮಗಳಲ್ಲಿ ಜನರ ಮಧ್ಯೆ ತಿಕ್ಕಾಟವಿರುವುದು ಸಾಮಾನ್ಯ. ಆದರೆ ಅವುಗಳ ಮಧ್ಯೆ ಸಾಮಾಜಿಕ ಸಾಮರಸ್ಯ ಮೂಡಿಸಲು ಅಬ್ಬಿಗೇರಿಯ ಅನ್ನದಾನೇಶ್ವರ ಶಾಖಾಮಠದ ಭಕ್ತರ ಕಾರ್ಯ ಅತ್ಯಂತ ಪ್ರಮುಖವಾಗಿದೆ ಎಂದು ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಅನ್ನದಾನೇಶ್ವರ ಶಾಖಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಲ್ಲಿ ನೆಡೆಯುತ್ತಿರುವ ತೇರಿನ ಮನೆ ಹಾಗೂ ಕಲ್ಯಾಣ ಮಂಟಪದ ಕಾಮಗಾರಿಯನ್ನು ವೀಕ್ಷಣೆ ಮಾಡಿ. ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮಠದ ಕಮಿಟಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯುವ ಜನಾಂಗಕ್ಕೆ ಮಾರ್ಗದರ್ಶನದ ಜೊತೆ ಸ್ವಾವಲಂಬಿ ಆಗುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಕಮೀಟಿ ಸರ್ವ ಸದಸ್ಯರ ಹಾಗೂ ಗ್ರಾಮದ ಭಕ್ತರ ಅಭಿಮಾನ ಪ್ರತಿಯೊಂದು ಗ್ರಾಮಗಳ ಭಕ್ತರಿಗೆ ಅರಿವಾಗುತ್ತದೆ. ಗ್ರಾಮಗಳಲ್ಲಿ ಮನಸ್ತಾಪಗಳು ಇರುವುದು ಸಾಮಾನ್ಯ. ಆದರೆ ಸಾಮಾಜಿಕ ಕಾರ್ಯಕ್ರಮಗಳು ಆಯೋಜಿಸಿದಾಗ ಮನಸ್ತಾಪಗಳನ್ನು ಬದಿಗೊತ್ತಿ ಒಗ್ಗೂಡಿಕೊಂಡು ಹೋಗುವುದು ಒಳಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದನ್ನು ಯುವಕರು ಮನವರಿಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.
ಕೊಟ್ಟೂರು ದೇಶಕರು, ಮಠದ ಭಕ್ತರಾದ ಮಹ್ಮಾತಪ್ಪ ಬಸವರಡ್ಡೇರ, ಮಲ್ಲಿಕಾರ್ಜುನ ಕಲ್ಯೇಶಾಣಿ, ಸಂಗಪ್ಪ ಕುಂಬಾರ, ಬಸಯ್ಯ ಕಳ್ಳಿಮಠ, ಮಾನಪ್ಪ ಕಮ್ಮಾರ, ಶಿವಪ್ಪ ಶಿದ್ನೇಕಕೊಪ್ಪ, ಚನ್ನಪ್ಪ ಬಸವರಡ್ಡೇರ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

loading...