ಕಳಪೆ ಕಾಮಗಾರಿ-ಬಿಜೆಪಿ ಆಕ್ರೋಶ

0
4
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಮುಖ್ಯ ರಸ್ತೆಯಾದ ಜೆ.ಎನ್‌. ರಸ್ತೆಯ ಕೆಲ ಭಾಗ ಸೇರಿದಂತೆ ನಗರದ ಹಲವು ರೆಸ್ತೆಗಳಿಗೆ ಡಾಮರೀಕರಣ ಮಾಡಿ ವರ್ಷವಾಗುವುದೊರಳಗೆ ಮೊದಲ ಮಳೆಗೆ ಆ ಎಲ್ಲ ರಸ್ತೆಗಳು ಕೊಚ್ಚಿ ಹೋಗಿವೆ. ಕಳಪೆ ಕಾಮಗಾರಿಯೆ ಇದಕ್ಕೆ ಪ್ರಮುಖ ಕಾರಣವೆಂದು ನಗರದ ಬಿಜೆಪಿ ಘಟಕÀ ಆಕ್ಷೇಪಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ನಗರ ಬಿಜೆಪಿ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಕಾರ್ಯದರ್ಶಿ ನರೇಂದ್ರ ಚೌಹಾಣ, ಸುಭಾಶ ಅರವೇಕರ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ ಮುಂತಾದವರು ಜೆ.ಎನ್‌. ರಸ್ತೆ ಇದು ನಗರದ ಮುಖ್ಯ ರಸ್ತೆಯಾಗಿದೆ. ನಿತ್ಯ ಇಲ್ಲಿ ವಾಹನ ದಟ್ಟಣೆಯಿರುತ್ತದೆ. ಆದರೆ ಈ ರಸ್ತೆ ಇದಿಗ ಜನ ಹಾಗೂ ವಾಹನಗಳು ಸಂಚಾರ ಮಾಡಲಾಗದಂತಹ ಸ್ಥಿತಿ ತಲುಪಿದೆ. ರಸ್ತೆಯುದ್ದಕ್ಕೂ ಹಾಕಿದ ಡಾಂಬರಗಳು ಕಿತ್ತು ಕಡಿ ಮೇಲೆ ಬಂದು ಹರಡಿಕೊಂಡಿದೆ. ನಡು ನಡುವೆ ದೊಡ್ಡ ಗಾತ್ರದ ಹೊಂಡಗಳೂ ಬಿದ್ದಿವೆ. ಇದರಿಂದ ವಾಹನಗಳು ಸ್ಕಿಡ್‌ ಆಗಿ ಅಪಘಾತಗಳು ಸಂಭವಿಸುವ ಸಾದ್ಯತೆಗಳು ಹೆಚ್ಚಾಗಿವೆ ಎಂದು ಆಕ್ಷೇಪಿಸಿದ್ದಾರೆ. ಅಂತೆಯೆ ನಗರದಲ್ಲಿ ನಿರ್ಮಿಸಿರುವ ಅನೇಕ ಒಳ ರಸ್ತೆಗಳೂ ಸಹ ಕೆಟ್ಟು ಹೋಗಿವೆ. ಹೊಂಡಗಳು ಬಿದ್ದಿವೆ ಎಂದಿರುವ ಬಿಜೆಪಿ ಪ್ರಮುಖರು ವಿವಿಧೆಡೆ ನಡೆದಿರುವ ರಸ್ತೆ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಗರದಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವೆಡೆ ನಗರೋತ್ಥಾನದ ಕೆಲಸಗಳು ನಡೆಯುತ್ತಿವೆ. ಈ ನಗರೋತ್ಥಾನದಲ್ಲಿ ಕೆಲವೆಡೆ ಗುಣಮಟ್ಟದ ಕೆಲಸ ಆಗುತ್ತಿದೆಯಾದರೂ ಮುಖ್ಯ ಗುತ್ತಿಗೆದಾರರಿಂದ ತುಂಡು ಗುತ್ತಿಗೆ ಪಡೆದವರು ಕೆಲವೆಡೆ ಮಾಡುತ್ತಿರುವ ರಸ್ತೆ, ಚರಂಡಿ ಸೇರಿದಂತೆ ಹಲವು ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ನಡೆಯುತ್ತಿವೆ. ಈ ಬಗ್ಗೆ ನಗರಾಡಳಿತದ ಅಧಿಕಾರಿಗಳು ಸಹ ನಿರ್ಲಕ್ಷ ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು ಈ ಎಲ್ಲ ಕಳಪೆೆ ಕಾಮಗಾರಿಗಳನ್ನು ಪರಿಶಿಲಿಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ಘಟಕ ಒತ್ತಾಯಿಸಿದೆ.

loading...