ಕಳೆದುಕೊಂಡು ಹಣ ಮರಳಿಸಿ ಮಾನವೀಯತೆ ಮೆರೆದ ಯುವಕರು.

0
27
loading...

ಕಳೆದುಕೊಂಡು ಹಣ ಮರಳಿಸಿ ಮಾನವೀಯತೆ ಮೆರೆದ ಯುವಕರು.

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ತೆಂಗಿನಕೇರಿ ಗಲ್ಲಿಯಲ್ಲಿ ರಸ್ತೆಯ ಮೇಲೆ ಬಿದ್ದಿದ್ದ ಹಣದ ಪಾಕೀಟ್ ತೆಂಗೀನಕೇರಿ ರಾಜಗುರು ಯುವಕ ಮಂಡಳದವರು ಹಣ ಕಳೆದುಕೊಂಡಿದ್ದ ಆಜಾಯ ಗಲ್ಲಿಯ ನಿವಾಸಿ ಮಮತಾಜ್ ಬಾಗವಾನ ಎಂಬುವರಿಗೆ ಹಣ ಮರಳಿಸಿ ಮಾನವೀಯತೆ ಮೆರೆದಿದ್ದಾರೆ .

ಕಳೆದ ಸೋಮವಾರ ಮಮತಾಜ್ ತೆಂಗಿನಕೇರಿ ಗಲ್ಲಿಯಲ್ಲಿ ಹಣ ಕಳೆದುಕೊಂಡಿದ್ದರು .
ಈ ಹಣ ರಾಜು ಪಾಟೀಲ ಎಂಬುವರಿಗೆ ಸಿಕ್ಕಿತ್ತು ,ಅವರು ಆ ಹಣವನ್ನು
ರಾಜಗುರು ಯುವಕ ಮಂಡಳಿ ದ ಮೂಲಕ ಮಾಲಿಕರಿಗೆ ಮುಟ್ಟಿಸುವಂತೆ ಹೇಳಿದ್ದರು .

ಹಣ ಕಳೆದುಕೊಂಡವರನ್ನು ಗುರುತಿಸಲು ಈ ಯುವಕ ಮಂಡಳಿಯವರಾದ ಸುನೀಲ ಜಾಧವ್ ವಿಜಯ ಮೋಹೆತೆ ,ಸತೀಶ ಘಸಾರಿ ,ನೀಕೇತನ ಮೇನಶೆ,ಪಾಕೀಟ್ ದಲ್ಲಿರುವ ಚಿಕ್ಕ ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದ ಹಾಕಿದರು.

ಇದನ್ನು ಗಾಂಧಿ ನಗರ ನಿವಾಸಿ ಸುದರ್ಶನ ನಾಯಕ ಮಗುವಿನ ಪರಿಚಯ ವಿದ್ದರಿಂದ ಅವರು ತೆಂಗಿನಕೇರಿ ಗಲ್ಲಿಗೆ ಬಂದು ವಿಚಾರಿಸಿದಾಗ
ಪಾಕೀಟ್ ದಲ್ಲಿ ಸುಮಾರು ಹನ್ನೊಂದು ಸಾವಿರದ ಮುನ್ನೂರು ರೂಪಾಯಿ ನಗದು ಹಣವನ್ನು ಮಾಲಿಕರಾದ ಶಬ್ಬೀರ ಬಾಗವಾನ ಮರಳಿಸಲಾಯಿತು .

loading...