ಕಳ್ಳರ ಬಂಧನ: ಮೂರು ಬೈಕ್ ವಶಕ್ಕೆ

0
37
loading...

ಕೊಪ್ಪಳ: ನಗರದ ವ್ಯಾಪ್ತಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಸರಗಳ್ಳರನ್ನು ಕೊಪ್ಪಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ. ಅನೂಪ ಶೆಟ್ಟಿ, ಬೆಂಗಳೂರಿನಲ್ಲಿ ಸರಗಳ್ಳರು ಬೈಕ್ ನಲ್ಲಿ ಸರಗಳ್ಳತನ ಮಾಡುತ್ತಿದ್ದ ರೀತಿಯಲ್ಲೆ ಇವರು ಸಹ ಕೊಪ್ಪಳ, ಭಾಗ್ಯನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ತಿಳಿಸಿದರು.
ಬಂಧಿತರಲ್ಲಿ ಸ್ಥಳೀಯ ಪತ್ರಿಕೆಯ ಮಾಲಿಕ, ಸಂಪಾದಕನ ಪುತ್ರ ಪುರುಷೋತ್ತಮ ಜೂಡಿ ಹಾಗೂ ಪ್ರಮೋದ ಪಾಟೀಲ್ ಎಂಬುವರು ಪ್ರಮುಖ ಆರೋಪಿತರು, ಬಂಗಾರದ ಆಭರಣಗಳನ್ನು ಮತ್ತು ಅವುಗಳನ್ನು ಖರೀ ದಿಸಿದ ಸಿದ್ರಾಮಪ್ಪ ಚಿಕ್ಕಸಿಂದೋಗಿ, ಕಾಳಿಪ್ರಸಾದ, ಸಂತೋಷ ಭಾಗ್ಯನಗರ ಇವರನ್ನು ಬಂಧಿಸಲಾಗಿದೆ.
ಬಂಧಿತರು ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿ 6.90 ಲಕ್ಷ ಮೌಲ್ಯದ 230 ಗ್ರಾಂ ಚಿನ್ನಾಭರಣ ಹಾಗೂ ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೈಕ್ ಗಳ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಈ ಕೃತ್ಯಗಳನ್ನು ಎಸಗಿದ್ದಾರೆ ಎಂದು ತಿಳಿಸಿದರು.

loading...