ಕಾಂಗ್ರೆಸ್‌ ಪಕ್ಷ ಬಲವರ್ಧನೆ ಮಾಡಬೇಕು: ಖಂಡ್ರೆ

0
10
loading...

ಕನ್ನಡಮ್ಮ ಸುದ್ದಿ-ಮುಧೋಳ: ಮುಂಬರುವ ಲೋಕಸಭಾ ಚುನಾವಣೆ ಸಿದ್ಧತೆಯನ್ನು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲವರ್ಧನೆ ಮಾಡಿ ನಮಗೆ ನೀಡಿದ ಜವ್ದಾರಿಯನ್ನು ನಿಭಾಹಿಸುತ್ತೇವೆ ಸದ್ಯದಲ್ಲೇ ಬಾಗಲಕೋಟ ಜಿಲ್ಲಾ ಕಾಂಗ್ರೆಸ್‌ ಪಕ್ಷದ ನಾಯಕರ ಸಭೆಯನ್ನು ಕರೆಯಲಾಗುತ್ತದೆ ಎಂದು ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಜಮಖಂಡಿ ನಗರಕ್ಕೆ ತೆರಲುವಾಗ ಮಾರ್ಗ ಮಧ್ಯ ಮುಧೋಳ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿ, ಮುಧೋಳ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ ನಾಯಿಕ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜುಗೌಡ ಪಾಟೀಲ, ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಉದಯಸಿಂಗ್‌ ಪಡತಾರೆ, ಮಹಿಳಾ ಕಾಂಗ್ರೆಸ್‌ ಜಿಲ್ಲಾದ್ಯಕ್ಷೆ ರಕ್ಷಿತಾ ಈಟಿ, ಮಹಾಂತೇಶ ಉದಪುಡಿ, ಮುಧೋಳ ಬ್ಲಾಕ್‌ ಎಸ್‌.ಸಿ ಘಟಕದ ಅಧ್ಯಕ್ಷ ಮಹಾದೇವ ಮಾದರ, ಭೀಮಶಿ ಸರಕಾರಕುರಿ, ಮುದಕಣ್ಣ ಅಂಬಿಗೆರ, ತಾ.ಪಂ ಸದಸ್ಯ ಸಂಗಪ್ಪ ಇಮ್ಮಣವರ, ತಾಲೂಕಾ ಪಂಚಾಯತ್‌ ಸದಸ್ಯರು ಮತ್ತು ನಗರಸಭೆ ಸದಸ್ಯರು ಇತರರು ಉಪಸ್ಥಿತರಿದ್ದರು.

loading...