ಕಾಫಿನಾಡಿಗೂ ಕಾಲಿಟ್ಟ ಬುರ್ಕಾ ವಿವಾದ

0
19
loading...

ಬೆಂಗಳೂರು: ಕಾಫಿನಾಡಿಗೂ ಬುರ್ಕಾ ವಿವಾದ ಕಾಲಿಟ್ಟಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ.
ಹಲವು ವರ್ಷಗಳಿಂದಲೂ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ರೆಸ್ಟ್ ರೂಂನಲ್ಲಿ ಬುರ್ಖಾವನ್ನು ತೆಗೆದಿಟ್ಟು ಎಲ್ಲಾ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗುತ್ತಿದ್ದರು. ಆದರೆ ಈ ವರ್ಷ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದರು.
ಇದೀಗ ಎಬಿವಿಪಿ ವಿದ್ಯಾರ್ಥಿಗಳು ಇಷ್ಟು ವರ್ಷವಿದ್ದಂತೆ ಇರಲಿ, ಬುರ್ಖಾ ತೆಗೆದು ಬರುವಂತೆ ಹೇಳಿ ಪ್ರಾಂಶುಪಾಲ ಅನಂತ್ ಅವರಿಗೆ ಜೂನ್ ೩೦ ರಂದು ಶನಿವಾರ ಮನವಿ ಮಾಡಿದ್ದರು. ಆದರೆ ಪ್ರಾಂಶುಪಾಲ್ ಅನಂತ್ ಆ ರೀತಿ ಕಾನೂನಿನಲ್ಲಿ ಅವಕಾಶವಿಲ್ಲ. ಧರಿಸದಂತೆ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಪ್ರಾಂಶುಪಾಲರ ಹೇಳಿಕೆಯಿಂದ ಕೆರಳಿದ ಎಬಿವಿಪಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರೋದಾಗಿ ಪ್ರಿನ್ಸಿಪಾಲ್ ಗೆ ಸೆಡ್ಡು ಹೊಡಿದಿದ್ದು, ಹೇಳಿದಂತೆ ಜುಲೈ ೨ನೇ ಸೊಮವಾರ ಎಬಿವಿಪಿ ವಿದ್ಯಾರ್ಥಿಗಳೆಲ್ಲರೂ ಕಾಲೇಜಿಗೆ ಕೇಸರಿ ಶಲ್ಯ ಧರಿಸಿ ಬಂದಿದ್ದಾರೆ

loading...