ಕುಂಭದ್ರೋಣ ಮಳೆಗೆ ಕರಾವಳಿ ತತ್ತರ

0
14
loading...

ಮಂಗಳೂರು: ಕರಾವಳಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ರವಿವಾರ ಕೂಡ ಮುಂದುವರೆದಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಜನರಿಗೆ ಸಹಾಯವಾಗಲು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಜಿಲ್ಲಾಡಳಿತ ಸಹಾಯವಾಣಿ ತರೆದಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ನದಿಗಳು ತುಂಬಿದ್ದು ತೆಗ್ಗು ಪ್ರದೇಶಗಳು ಜಲಾವೃತವಾಗಿದೆ. ಜನರ ರಕ್ಷಣೆಗೆ ಧಾವಿಸಿರುವ ರಾಷ್ಟ್ರೀಯ ಭದ್ರತಾ ರಕ್ಷಣಾ ಪಡೆಯ 30 ಜನರ ತಂಡ ಇಂದು ಮಂಗಳೂರಿಗೆ ಆಗಮಿಸಿದೆ. ಒಂದು ತಂಡ ದಕ್ಷಿಣ ಕನ್ನಡ ಮತ್ತು ಇನ್ನೊಂದು ತಂಡ ಉಡುಪಿ ಜಿಲ್ಲೆಯಲ್ಲಿ ಪರಿಹಾರ ಕಾರ್ಯ ನಡೆಸುತ್ತಿದೆ.
ಕಳೆದ 2 ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಗೆ ಮೂವರು ಮೃತಪಟ್ಟಿದ್ದಾರೆ. ಕುಂಭದ್ರೋಣ ಮಳೆಗೆ ಪುತ್ತೂರು ತಾಲೂಕಿನ ಹೆಬ್ಬಾರ್ ಬೈಲ್ ಎಂಬಲ್ಲಿ ಗುಡ್ಡದ ಬದಿಯಲ್ಲಿದ್ದ ಮಣ್ಣು ಕುಸಿದು ಬಿದ್ದು ಮನೆಯಲ್ಲಿ ಮಲಗಿದ್ದ ಇಬ್ಬರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ, ಮನೆ ಹಾನಿ ಮತ್ತು ಸಾವಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಯು.ಟಿ ಖಾದರ್ ಅಧಿಕಾರಿಗಳ ತುರ್ತು ಸಭೆ ನಡೆಸಿ ಎಲ್ಲ ಅಧಿಕಾರಿಗಳು ಜಾಗೃತರಾಗಿರುವಂತೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.

loading...