ಕುಡಚಿ ಪಟ್ಟಣದಲ್ಲಿ ದಿನನಿತ್ಯ ವಿದ್ಯುತ್ ಕಾಟ ಕೇಳುವರಿಲ್ಲದಂತೆ ವರ್ತಿಸುತ್ತಿರುವ ಅಧಿಕಾರಿಗಳು

0
5
ಕುಡಚಿ: ಸ್ಥಳೀಯ ಕುಡಚಿ ಪಟ್ಟಣದಲ್ಲಿ ಹೆಸ್ಕಾಂ ದವರು ಕುಡಚಿ ಪ್ರದೇಶದ ಎಲ್ಲ ಎಲ್.ಟಿ. ಲೈನ್ ವೈರಗಳನ್ನು ಬದಲಿಸುವ ನೆಪದಲ್ಲಿ ಸುಮಾರು ೧೫ ದಿನಗಳಿಂದ ವಾರದಲ್ಲಿ ೩-೪ ಬಾರಿ ದಿನ ಪೂರ್ತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಾರೆ. ಇದರಿಂದ ಕುಡಚಿ ಸ್ಟೆÃಶನ್ ಪ್ರದೇಶದಲ್ಲಿ ವಿದ್ಯುತ್‌ನ್ನೆ ನಂಬುಕೊಂಡು ಜೀವನವನ್ನು ಸಾಗಿಸುತ್ತಿರುವ ಸಾವಿರಾರು ವ್ಯಾಪಾರಸ್ಥ ಕುಟುಂಬಗಳ ಆರ್ಥಿಕ ಪರಿಸ್ಥಿತಿ ತೀರ ಹದಿಗೆಟ್ಟು ಹೋಗಿದೆ. ಹೆಸ್ಕಾಂದವರು ವೈರಗಳನ್ನು ಬದಲಿಸುವ ಸಲುವಾಗಿ ೨-೩ದಿನ ವಿದ್ಯುತ್ ವ್ಯತ್ತೆಯವಾಗುವುದೆಂದು ಕೆಲ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದರು.
ಆದರೆ ಅಧಿಕಾರಿಗಳು ನಮ್ಮನ್ನು ಯಾರು ಏನು ಪಶ್ನಿಸಲಾರರು ಎಂಬಂತೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡದೇ ಸುಮಾರು ೧೫ ದಿನಗಳಿಂದ ವಾರದಲ್ಲಿ ೩-೪ದಿನಗಳ ಕಾಲ ದಿನ ಪೂರ್ತಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಾರೆ. ಇದರಿಂದ ವ್ಯಪಾರಸ್ಥರಷ್ಟೆÃ ಅಲ್ಲದೇ, ಸರಕಾರಿ ಕಛೇರಿಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು, ಮೆಡಿಕಲ್ ಲಾಬರೋಟರಿಗಳು, ಶಾಲಾ ಕಾಲೇಜುಗಳು, ಅರೆ ಸರಕಾರಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಸೆಂಟರ್‌ಗಳು ಇನ್ನಿತರ ಸೇವೆಗಳನ್ನು ಒದಗಿಸಲು ವ್ಯತ್ಯಯವಾಗುತ್ತಿದ್ದರಿಂದ ಸಾರ್ವಜನಿಕರಿಗೂ ಅತೀವ ತೊಂದರೆಯಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳೂ ಕೂಡಲೆ ಎಚ್ಚೆತ್ತು ಈ ಬಗ್ಗೆ ಗಮನ ಹರಿಸಬೇಕಾಗಿದೆ. ನಮ್ಮದು ಬೇಕರಿ ವ್ಯಾಪಾರ ನಾವು ವಿದ್ಯುತ್‌ನಿಂದಲೆ ಎಲ್ಲ ಕೆಲಸಗಳನ್ನು ಮಾಡುತ್ತೆÃವೆ. ಅಧಿಕಾರಿಗಳು ೨-೩ ದಿನಗಳು ವಿದ್ಯುತ್ ವ್ಯತಯವಾಗಲಿದೆ ಎಂದು ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ೨೦ ದಿನಗಳಿಂದ ವಾರದಲ್ಲಿ ೩-೪ದಿನ ದಿನ ಪೂರ್ತಿ ವಿದ್ಯುತ್ ತೆಗೆಯುತ್ತಿದ್ದಾರೆ. ಇದರಿಂದ ನಮಗೆ ತುಂಬಾ ನಷ್ಟವಾಗಿದೆ.

loading...