ಕುಮಟಾದಲ್ಲಿ ಭೀಕರ ಅಪಘಾತ: ಇಬ್ಬರ ಸಾವು ಶಂಕೆ

0
23
loading...

ಕುಮಟಾ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಗಾಲ್ಯಾಂಡನ ಲಾರಿ ಮತ್ತು ಸಾರಿಗೆ ಬಸ್‌ಗಳ ( *ಕುಮಟಾ-ಗೋಕರ್ಣ-ಕುಮಟಾ* ) ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಹೆದ್ದಾರಿಯಲ್ಲಿನ ಪಾಂಡುರಂಗ ಹೋಟೆಲ್‌ನ ಸಮೀಪ ಈ ಅಪಘಾತ ನಡೆದಿದ್ದು, ಸ್ಥಳೀಯರು, ಹೆಸ್ಕಾಂ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕಬ್ಬಿಣದ ಕ್ರೇನ್‌ನಂಥ ಬೃಹತ್ ಕಂಬವೊಂದನ್ನು ಕೊಂಡೊಯ್ಯುತ್ತಿದ್ದ ಲಾರಿಯು ಡಿಕ್ಕಿಯಾಗಿರುವುದರಿಂದ ಬಸ್‌ನಲ್ಲಿ ಒಂದು ಬದಿಯಲ್ಲಿ ಕುಳಿತಿದ್ದ ಎಲ್ಲರಿಗೂ ಗಾಯಗೊಂಡು, ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇನ್ನು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗುತ್ತಿದೆ.

loading...