ಕೃಷಿ ಭಾಗ್ಯ ಯೋಜನೆಯಲ್ಲಿನ ಅವ್ಯವಹಾರ: ತನಿಖೆಗೆ ಒತ್ತಾಯ

0
17
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ತಾಲೂಕಿನ ಹಂಗರಗಿ ಗ್ರಾಮದ ಕೃಷಿ ಭಾಗ್ಯ ಯೋಜನೆಯಲ್ಲಿ ನಡೆದ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಬುಧವಾರ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧೀಕ್ಷಕ ಆರ್‌. ಎಚ್‌. ಧರಿ ಅವರ ಮುಖಾಂತರ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಅಪ್ಪು ಗಬ್ಬೂರ ಮಾತನಾಡಿ, ಹಂಗರಗಿ ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಕೆಲಸವನ್ನು ನಿರ್ವಹಿಸದೆ ಹಣ ಪಾವತಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಫಲಾನುಭವಿಗಳ ಯಾವುದೇ ಜಮೀನಿನಲ್ಲಿ ಕೃಷಿ ಹೊಂಡ ಕಾಣುತ್ತಿಲ್ಲ ಹಾಗೂ ಅಗಷ್ಟ 8, 2016ರಂದು ಮಾಹಿತಿ ಹಕ್ಕು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರು ಇಲ್ಲಿನ ಸಿಬ್ಬಂದಿ ಮಾಹಿತಿ ನೀಡುತ್ತಿಲ್ಲ. ಕೃಷಿ ಭಾಗ್ಯ ಯೋಜನೆಯಲ್ಲಿ ಭಾರಿ ಅವ್ಯಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಕೂಡಲೇ ಹಂಗರಗಿ ಗ್ರಾಮದ ಕೃಷಿ ಭಾಗ್ಯದ ಫಲಾನುಭವಿಗಳ ಜಮೀನಿನಲ್ಲಿ ಸ್ಥಾನಿಕ ಚೌಕಾಸಿ ನಡೆಸಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಒಂದು ವೇಳೆ ಕೃಷಿ ಭಾಗ್ಯ ಯೋಜನೆ ತನಿಖೆಗೆ ಒಳಪಡಿಸದಿದ್ದಲ್ಲಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗ್ರಾಮದ ರೈತರೊಂದಿಗೆ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರಿ ಕೃಷಿ ತಾಂತ್ರಿಕ ಗ್ರೇಡ್‌2 ಅಧಿಕಾರಿ ಲಿಂಗರಾಜ ತಾಳಿಕೋಟಿ, ಸಂಘಟನೆಯ ತಾಲೂಕು ಉಪಾಧ್ಯಕ್ಷ ಬಸವರಾಜ ರಾಯಗೊಂಡ, ಗ್ರಾಮ ಘಟಕದ ಅಧ್ಯಕ್ಷ ಮಾಹಾಂತೇಶ ಇಂಗಳೇಶ್ವರ, ಹಣಮಂತ ಗಬ್ಬೂರ, ದಾದಾಗೌಡ ಪಾಟೀಲ, ವಿನೋದ ಇಂಗಳೇಶ್ವರ, ಗಂಗಾಧರ ಬಡಿಗೇರ, ಹಣಮಂತ ಅಗಸರ, ಈರಪ್ಪ ಹಂಗರಗಿ, ಮಾಂತೇಶ ಮೂಲಿಮನಿ ಸೇರಿದಂತೆ ಇತರರು ಇದ್ದರು.

loading...