ಕೃಷ್ಣೆಗೆ ಬಾಗಿನ ಅರ್ಪಣೆ

0
12
loading...

ಆಲಮಟ್ಟಿ: ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ನೇತ್ರತ್ವದಲ್ಲಿ ಗುರುಪೂರ್ಣಿಮೆ ದಿನವಾದ ಶುಕ್ರವಾರ ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ನಡೆಯಿತು. ಕೃಷ್ಣಾ ಕಣಿವೆ ರೈತ ಹಿತರಕ್ಷಾಣಾ ಸಮಿತ,ಅಖಂಡ ಕರ್ನಾಟಕ ರೈತ ಸಂಘ ಕರುನಾಡು ಜನಬೆಂಬಲ ವೇದಿಕೆ. ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೊಳ್ಳಿನ ವಾಧ್ಯ ಭಾಜಾ ಬಜಂತ್ರಿಯ ಸದ್ಧಿನ ವೈಭವದೊಂದಿಗೆ, ಸಾಗಿದ ಮೆರವಣಿಗೆಯಲ್ಲಿ 300ಕ್ಕೂ ಹೆಚ್ಚು ಮುತ್ತೈದೆಯರು ಪಾಲ್ಗೊಂಡಿದ್ದರು. ಹೊಚ್ಚ ಹೊಸ ಕುಂಭವನ್ನು ಹೊತ್ತು ಅದರ ಮೇಲಿಟ್ಟ ತೆಂಗಿನಕಾಯಿಗೆ ತೊಡಸಿದ್ದ ಹಸಿರು ಬಣ್ಣ ಕುಪ್ಪಸ ಹೊತ್ತುಕೊಂಡು ಸಾಲಾಗಿ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು.
ಅವರ ಜೊತೆ ರೈತ ಮುಖಂಡರು, ನೂರಾರು ಜನರು ಸಾಥ್‌ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಇಲ್ಲಿಯ ಚಂದ್ರಮ್ಮಾ ದೇವಸ್ಥಾನದ ಬಳಿಯಲ್ಲಿರುವ ಕೃಷ್ಣೆಯ ಹಿನ್ನೀರಿಗೆ ಬಂದು ತಲುಪಿತು. ಅಲ್ಲಿ ಬಾಗಿನ ಪೂಜೆ ಶೃದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಬಸವರಾಜ ಕುಂಬಾರ, ಶಿವಾನಂದ ಅವಟಿ, ಶ್ರೀಮತಿ,ಅಶ್ವಿನಿ ಪಟ್ಟಣಶೆಟ್ಟಿ ಸಂಗಣ್ಣ ಕೋತಿನ್‌,ಗುಂಡಪ್ಪ ಕುರಿ, ಮಲ್ಲಿಕಾರ್ಜುನ ಕುಂಬಾರ,ನಿಂಗಣ್ಣ ಆಲೂರ, ಸೇರಿದಂತೆ ಅನೇಕ ಸ್ವಾಮೀಜಿಗಳು,ರೈತಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಲಮಟ್ಟಿ ಜಲಾಶಯದ ನಿರ್ಮಾಣಕ್ಕೆ ಅಂದು ಕಲ್ಲು ಮಣ್ಣು ಹೊತ್ತು ಗೌಂಡಿ ಕೆಲಸ ನಿರ್ವಹಿಸಿ ಕಾರ್ಮಿಕರಾಗಿದ್ದ ಭೀಮಶಿ ಕೊಳ್ಳಾರ, ಲಕ್ಷ್ಮಣ ಕೊಳ್ಳಾರ, ನಬಿಸಾಬ ಮುಲ್ಲಾ, ಮಾದೇವಪ್ಪ ಹೆರಕಲ್‌, ಕಾಳಿಂಗಪ್ಪ ಗಣಿ, ವಿಠ್ಠಲ ಧನವೆ,ಸೇರಿದಂತೆ ಇತರರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಸಹಾಯಕ ಇಂಜಿನೀಯರ ನರೇಂದ್ರ, ಆಲಮಟ್ಟಿ ಆಣೆಕಟ್ಟು ವಿಭಾಗದ ಪಿಎಸ್‌ಐ, ವೀರಪ್ಪ ವಾಲಿ ಅವರನ್ನು ಸಹ ಸತ್ಕರಿಸಲಾಯಿತು. ಸಮಾರಂಭದ ಸಾನಿಧ್ಯತೆ ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಇಟಗಿಯ ಮೇಲುಗದ್ದಿಗೆ ಮಠದ ಶಾಂತವೀರ ಸ್ವಾಮಿಜಿ, ಯರಝರಿ ಯಲ್ಲಾಲಿಂಗ ಮಠದ ಮಲ್ಲಾಲಿಂಗ ಸ್ವಾಮಿಜಿ, ಮಹಾದೇವ ಶಾಸ್ತ್ರಿ, ನಿತ್ಯಾನಂದ ಸ್ವಾಮಿಗಳು, ಸಂಗಯ್ಯ ವೇದಮೂರ್ತಿ, ಮತ್ತಿತರರು ಶ್ರೀಗಳು ವಹಿಸಿದ್ದರು.

loading...