ಕೆಆರ್‍ಎಸ್ ಡ್ಯಾಂನ ನೀರಿಗೆ ಬಣ್ಣದ ಬೆಳಕಿನ ಚಿತ್ತಾರ

0
11
loading...

ಬೆಂಗಳೂರು:ಮಳೆರಾಯನ ಕೃಪೆಯಿಂದ ತುಂಬಿ ತುಳುಕುತ್ತಿರುವ ಕೆಆರ್‍ಎಸ್ ಡ್ಯಾಂನ ನೀರಿಗೆ ಬಣ್ಣದ ಬೆಳಕಿನ ಚಿತ್ತಾರವನ್ನು ಅಳವಡಿಸಲಾಗಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಜಲಾಶಯವು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಲ್ಲಿರುವ ನೀರಿನ ಮೇಲೆ ತ್ರಿವರ್ಣ ಧ್ವಜದ ಬಣ್ಣವನ್ನು ಬೆಳಕಿಗೆ ಅಳವಡಿಸಲಾಗಿದೆ. ಜಲಾಶಯದ ಅಧಿಕಾರಿಗಳ ಈ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ದೃಶ್ಯ ನೋಡುಗರ ಮನಸೂರೆಗಳ್ಳುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಸಾವಿರಾರು ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕಲಾ ವೈಭವವನ್ನು ಸೃಷ್ಟಿಸಿದ್ದಾರೆ.

loading...