ಕೆಚ್ಚೆದೆಯ ಹೋರಾಟಗಾರ ಅಜೀತ ನಾಯಕ ಹತ್ಯೆ ಕಂಬನಿ ಮಿಡಿದ ಗಣ್ಯರು

0
22
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ವಕೀಲರ ಸಂಘದ ಅಧ್ಯಕ್ಷರು, ಕೆಚ್ಚೆಎಯ ಹೋರಾಟಗಾರರಾಗಿದ್ದ ಅಜೀತ ನಾಯಕರವರ ಬರ್ಬರ ಹತ್ಯೆಗೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವರು:- ಅಜೀತ ನಾಯಕರವರು ನನ್ನ ಬಹುಕಾಲದ ಗೆಳೆಯರಾಗಿದ್ದರು. ರಾಜಕೀಯವಾಗ ಒಂದೆ ಪಕ್ಷದಲ್ಲಿ ಇದ್ದುಕೊಂಡವರು ನಾವಿಬ್ಬರು. ದಾಂಡೇಲಿ ತಾಲೂಕಿಗಾಗಿ ಅಜೀತ ನಾಯಕರವರು ಮಾಡಿದ ಹೋರಾಟ ಸ್ಮರಣೀಯವಾದ ಹೋರಾಟ. ಅಜೀತ ನಾಯಕರ ಬರ್ಬರ ಕೊಲೆಯನ್ನು ಸಹಿಸಲಾಗುತ್ತಿಲ್ಲ. ಆರೋಪಿಯನ್ನು ತ್ವರಿತಗತಿಯಲ್ಲಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ವರಿಷ್ಟಾಧಿಕಾರಿಯವರಿಗೆ ತಿಳಿಸಿದ್ದೇನೆ. ನಗರದ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದ್ದ ಅಜೀತ ನಾಯಕರ ಅಗಲುವಿಕೆ ತುಂಲಾರದ ನಷ್ಟ. ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲೆಂದು ತಿಳಿಸಿದ ಸಚಿವ ದೇಶಪಾಂಡೆಯವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಸುನೀಲ ಹೆಗಡೆ, ಮಾಜಿ ಶಾಸಕರು: ಅಜೀತ ನಾಯಕರ ಭೀಕರ ಹತ್ಯೆ ಖಂಡನೀಯ. ಕೊಲೆ ಮಾಡಿದ ಆರೋಪಿಯನ್ನು ಕೂಡಲೆ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಹೋರಾಟಗಳ ಮುಂಚೂಣಿ ನಾಯಕತ್ವವನ್ನು ವಹಿಸಿಕೊಳ್ಳುತ್ತಿದ್ದ ಅಜೀತ ನಾಯಕರವರ ಆತ್ಮಕ್ಕೆ ಶಾಂತಿ ಪ್ರಾಪ್ತವಾಗಲೆಂದು ಮಾಜಿ ಶಾಸಕ ಸುನೀಲ ಹೆಗಡೆ ಪ್ರಾರ್ಥಿಸಿದ್ದಾರೆ.
ಸೈಯದ್‌.ಕೆ.ತಂಗಳ, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ದಾಂಡೇಲಿ: ಊಹಿಸಲು ಅಸಾಧ್ಯವಾದ ಘಟನೆಯಿದು. ರಾಜಕೀಯವಾಗಿ, ಸಾಮಾಜಿಕವಾಗಿ ದಾಂಡೇಲಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದ ಮುತ್ಸದ್ದಿ ನಾಯಕರಾಗಿದ್ದ ಅಜೀತ ನಾಯಕರವರ ನಿಧನ ನಗರದ ಅಭಿವೃದ್ಧಿಗೆ ತುಂಬಲಾರದ ನಷ್ಟ ಎಂದ ಸೈಯದ್‌.ಕೆ.ತಂಗಳ ಅವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ನಗರ ಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆ, ಹಿರಿಯ ಸಾಹಿತಿ ಮಾಸ್ಕೇರಿ.ಎಂ.ಕೆ.ನಾಯಕ, ಹಿರಿಯ ಸಮಾಜ ಸೇವಕ ಟಿ.ಆರ್‌.ಚಂದ್ರಶೇಖರ, ರೋಟರಿ ಕ್ಲಬ್‌ ಅಧ್ಯಕ್ಷ ಎಸ್‌.ಪ್ರಕಾಶ ಶೆಟ್ಟಿ, ಕಾರ್ಯದರ್ಶಿ ಎಸ್‌.ಸೋಮಕುಮಾರ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ ವೈ.ಎನ್‌.ಮುನವಳ್ಳಿ, ದಾಂಡೇಲಿ ಪ್ರೆಸ್‌ ಕ್ಲಬ್‌ ಅಧ್ಯಕಷ ಬಿ.ಎನ್‌.ವಾಸರೆ, ನಗರ ಸಭೆಯ ಮಾಜಿ ಅಧ್ಯಕ್ಷ ತಸ್ವರ ಸೌದಗಾರ, ಹಿರಿಯ ಮುಖಂಡ ರಾಧಾಕೃಷ್ಣ ಕನ್ಯಾಡಿ, ಬಿಜೆಪಿ ಜಿಲ್ಲಾ ಪ್ರಕೋಷ್ಟ ಸಂಚಾಲಕ ರೋಶನ್‌ ನೇತ್ರಾವಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಧಾಕರ ರೆಡ್ಡಿ, ರಾಜ್ಯ ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್‌.ಪಿ.ನಾಯ್ಕ, ಸಿಪಿಐ(ಎಂ) ಮುಖಂಡ ಹರೀಶ ನಾಯ್ಕ, ಮುಖಂಡರುಗಳಾದ ಸೈಯದ ಅಬೀದ್‌, ಡಾ: ಜಿ.ವಿ.ಭಟ್‌, ರಾಜೇಸಾಬ ಕೇಸನೂರು, ಸತೀಶ ಬೆಂಡೆ, ಸತೀಶ ನಾಯ್ಕ, ಪ್ರವಾಸೋದ್ಯಮಿ ರವಿ ನಾಯಕ, ಉದ್ಯಮಿಗಳಾದ ವಿಷ್ಣುಮೂರ್ತಿ ರಾವ್‌, ನವೀನ ಕಾಮತ್‌, ಉದಯ ಶೆಟ್ಟಿ, ನಾಗರಾಜ ಶೆಟ್ಟಿ, ರಾಮಚಂದ್ರ ಹೆಬ್ಬಾರ್‌, ಗಣೇಶ ಹೆಬ್ಬಾರ್‌, ಸುಧೀರ ಶೆಟ್ಟಿ, ಭಜರಂಗ ದಳದ ಜಿಲ್ಲಾ ಪ್ರಮುಖ ಚಂದ್ರು ಮಾಲಿ ಮೊದಲಾದವರು ಅಜೀತ ನಾಯಕರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

loading...