ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿಲ್ಲ: ಕವಟಗಿಮಠ ಆರೋಪ

0
8
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 24: ತಾಲೂಕಿನ ಕಾಡಾಪೂರ, ಮಲಿಕವಾಡ, ವಡಗೋಲ ಮುಂತಾದ ಕೆರೆ ತುಂಬಿಸುವ ಯೋಜನೆ ಪೂರ್ಣಗೊಂಡರೂ ಆ ಕೆರೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆರೋಪಿಸಿದ್ದಾರೆ.
ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಮಂಗಳವಾರ 1 ಕೋಟಿ ರೂ.ವೆಚ್ಚದ ಚಿಂಚಣಿ-ತೋರಣಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜೈನಾಪೂರ ಕೆರೆ ನೀರು ತುಂಬಿಸುವಲ್ಲಿ ವಿಳಂಬವಾಗಲು ಯಾವುದೇ ರಾಜಕೀಯ ಶಕ್ತಿಗಳು ಕೆಲಸ ಮಾಡಿಲ್ಲ. ತಾಂತ್ರಿಕ ದೋಷಗಳಿಂದ ಕೆರೆಗೆ ನೀರು ಬರುವುದು ತಡವಾಗಿದೆ ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಪಂಚಾಯತ ರಾಜ್ಯ ಇಲಾಖೆಯಿಂದ ಗ್ರಾಮೀಣ ಪ್ರದೇಶದಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ತುಕ್ಕು ಹಿಡಿಯುತ್ತಿದ್ದು, ಘಟಕಗಳ ನಿರ್ವಹಣೆಯನ್ನು ಸರಕಾರವೇ ನಿರ್ವಹಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಕೆಲವೊಂದು ಊರಿಗೆ 15 ದಿನಕ್ಕೊಮ್ಮೆ ಕೂಡ ನೀರು ಬರುತ್ತಿಲ್ಲ ಇನ್ನೂ ಮುಂದಾದರೂ ಅಧಿಕಾರಿಗಳು ಮತ್ತು ಸಚಿವರು ದೂರ ದೃಷ್ಟಿಯೊಂದಿಗೆ ಇಂತಹ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದರು.
ಅಧಿಕಾರಿಗಳ ಕಾರ್ಯಲೋಪ:

ಜಿಲ್ಲಾಮಟ್ಟದ ಪ್ರವಾಹ ಪರಿಸ್ಥಿತಿ ಪರಿಶೀಲನಾ ಸಭೆ ಇರುವ ಬಗ್ಗೆ ಅಧಿಕಾರಿಗಳು ಮುಂಚಿನ ದಿನ ರಾತ್ರಿ ಜನಪ್ರತಿನಿಧಿಗಳಿಗೆ ತಿಳಿಸಿದ್ದಾರೆ ಇದರಿಂದ ಸಭೆಯಲ್ಲಿ ಬಹುತೇಕ ಜನಪ್ರತಿನಿಧಿಗಳಿಗೆ ಬರಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿರುವ ಕುರಿತು ಸಚಿವ ರಮೇಶ ಜಾರಕಿಹೊಳಿಯವರ ಗಮನಕ್ಕೆ ತಂದಿದ್ದು, ಇನ್ನು ಮುಂದೆ ಈ ರೀತಿ ತಪ್ಪು ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದ್ದಾರೆ ಎಂದರು.
ಅಪ್ಪಾಸಾಬ ಚೌಗಲಾ, ಅಬಯ ಪಾಟೀಲ, ಸುರೇಶ ಹೆಗಡೆ, ಭೀಮಗೌಡ ಚೊಂಚನ್ನವರ, ಸುಭಾಷ ಖೋತ, ಈರಗೌಡ ಚೊಂಚನ್ನವರ, ಪೋಪಟ ಖೋತ ಮುಂತಾದವರು ಉಪಸ್ಥಿತರಿದ್ದರು.

..

loading...