ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿದ ಮಹಾದೇವಿ ಕೊಪ್ಪದ

0
8
loading...

ಕನ್ನಡಮ್ಮ ಸುದ್ದಿ-ಕುಕನೂರು: ನನ್ನ ಪತಿ ಹನುಮಂತಪ್ಪ ಮಡಿದರು ಸಹ ನಾನಿಂದೂ ಅವರ ನೆನಪಿನಲ್ಲಿ ಸುಮಂಗಲೆಯಾಗಿದ್ದೇನೆ. ಅವರು ದೇಶ ಸೇವೆ ಮಾಡಿ ದೇಶಕ್ಕಾಗಿ ಪ್ರಾಣತೆತ್ತು ಅಜರಾಮರಾಗಿದ್ದಾರೆ ಎಂದು ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಕೊಪ್ಪದ ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಭಾನುವಾರ ದಿ. ಅನುಸೂಯಮ್ಮ ಚೌದ್ರಿ ಅವರ ಸ್ಮರಣಾರ್ಥ ಅವರ ಪುತ್ರ ಮಲ್ಲಿಕಾರ್ಜುನ್‌ ಚೌದ್ರಿ ಏರ್ಪಡಿಸಿದ್ದ ಸ್ನೇಹ ಸೌಹಾರ್ದಿಯುತ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ದೇಶ ಸೇವೆಗೆ ಮುಂದಾಗಬೇಕು. ದೇಶ ಸೇವೆ ಮಾಡಿದರೇ ಹೆತ್ತ ತಂದೆ-ತಾಯಿಯರ ಸೇವೆ ಮಾಡಿದಕ್ಕಿಂತ ಶ್ರೇಷ್ಠ. ನನ್ನ ಪತಿ ಹನುಮಂತಪ್ಪ ಪ್ರಾಣತೆತ್ತರೂ ಸಹ ನಾನಿಂದೂ ಅವರು ಮಾಡಿದ ದೇಶ ಸೇವೆಯ ನೆರಳಿನಲ್ಲಿ ಬದುಕುತ್ತಿದ್ದೇನೆ ಎಂದರು.
ಮುಖಂಡ ಮಹಾಂತೇಶ ಹೂಗಾರ ಮಾತನಾಡಿ, ತಾಯಿಯ ಸ್ಮರಣಾರ್ಥವಾಗಿ ಮಲ್ಲಿಕಾರ್ಜುನ್‌ ಚೌದ್ರಿ ಸತತ 5ನೇ ವರ್ಷ ಕ್ರಿಕೆಟ್‌ ಪಂದ್ಯಾವಳಿ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಮಹೇಶ ಜೇವೋಜಿ, ಅನ್ನಪೂರ್ಣಮ್ಮ ಚೌದರಿ, ಬಸಪ್ಪ ದಿವಟರ, ವಿಷ್ಣು ಚಿಲಗೋಡೆ ಮಹಾಂತೇಶ ಜಂಗ್ಲಿ, ಗಿರಿಧರ ನಿಲೋಗಲ್‌, ಮಂಜುನಾಥ ನಾಡಗೌಡರ್‌, ಬಸವರಾಜ ದಿವಟರ, ಅಡಿವೆಪ್ಪ ಹರ್ಲಾಪೂರ, ಪಾಂಡುರಂಗ, ಪಪಂ ಸದಸ್ಯ ಕನಕಪ್ಪ ಬ್ಯಾಡರ್‌, ಬಸವರಾಜ ಅಡವಿ, ಅಶೋಕ ಭಂಗಿ, ಯುವರಾಜ ಜಾಧವ್‌, ಬಾಳಪ್ಪ ಓಲಿ, ಭರಮಪ್ಪ ಬೋರಣ್ಣವರ್‌, ಬಸವರಾಜ ಮೇಟಿ ಇನ್ನಿತರರಿದ್ದರು.

loading...