ಕ್ರಿಕೆಟ್ : ಇತಿಹಾಸ ಬರೆಯಲು ಸಿದ್ದವಾದ ಆಂಗ್ಲರು, ನಾಳೆಯಿಂದ ಟೆಸ್ಟ ಸರಣಿಯ ಮೊದಲ ಪಂದ್ಯ ಆರಂಭ

0
27
loading...

ಲಂಡನ್ : ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಬುದವಾರದಿಂದ ಆರಂಭವಾಗಲಿದೆ. ಈ ಪಂದ್ಯ ಆತಿಥೇಯ ಇಂಗ್ಲೆಂಡ್ ಪಾಲಿಗೆ ಅವಿಸ್ಮರಣೀಯವಾಗಲಿದೆ. ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲು ಸಿದ್ಧವಾಗಿದೆ.

ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ನಲ್ಲಿ 1000 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಜೋ ರೂಟ್ ಪಡೆಯದ್ದಾಗಲಿದೆ. ಈವರೆಗೆ ಈ ಸಾಧನೆಯನ್ನು ವಿಶ್ವದ ಬೇರೆ ಯಾವ ತಂಡ ಸಹ ಮಾಡಿಲ್ಲ. ಹೀಗಾಗಿ ಸ್ಮರಣೀಯ ಪಂದ್ಯಕ್ಕಾಗಿ ಐಸಿಸಿ ಸಹ, ಇಂಗ್ಲೆಂಡ್ ತಂಡಕ್ಕೆ ಶುಭಕೋರಿದೆ.

1877ರಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಆಡಲು ಆರಂಭಿಸಿತು. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಅಂಗಳದಲ್ಲಿ ಮೊದಲ ಪಂದ್ಯ ಆಡಿ ಸೈ ಎನಿಸಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ 999 ಪಂದ್ಯ ಆಡಿದೆ. ಇದ್ರಲ್ಲಿ ಆಂಗ್ಲರ ಪಡೆ 357 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 297 ರಲ್ಲಿ ಸೋಲು ಕಂಡಿದ್ದು, 345 ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿವೆ.

ಎಡ್ಜ್ ಬಾಸ್ಟನ್ ಅಂಗಳ 1000 ನೇ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈವರೆಗೆ ಈ ಮೈದಾನಲ್ಲಿ 50 ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 27 ರಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ಈ ಅಂಗಳದಲ್ಲಿ ಆರು ಬಾರಿ ಕಣಕ್ಕೆ ಇಳಿದ್ರೆ, ಒಮ್ಮೆಯೂ ಜಯದ ಸವಿಯನ್ನು ಉಂಡಿಲ್ಲ.

ಇಂಗ್ಲೆಂಡ್ ಹಾಗೂ ಭಾರತ ತಂಡಗಳು 177 ಟೆಸ್ಟ್ ಪಂದ್ಯಗಳಲ್ಲಿ ಅಖಾಡ ಪ್ರವೇಶಿಸಿವೆ. ಈ ಲೆಕ್ಕಾಚಾರದಲ್ಲೂ ಇಂಗ್ಲೆಂಡ್ ಮುಂದಿದೆ. ಆಂಗ್ಲರ ಪಡೆ 43 ಬಾರಿ ಜಯದ ನಗೆ ಬೀರಿದ್ರೆ, 25ರಲ್ಲಿ ಸೋಲು ಕಂಡಿದೆ.

loading...