ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಸನ್ಮಾನ ಸಮಾರಂಭ

0
6
loading...

ಬಸವನಬಾಗೇವಾಡಿ : ಮಕ್ಕಳಲ್ಲಿ ಅಡಗಿರುವ ಕಲಾತ್ಮಕ ಪ್ರತಿಭೆಗಳನ್ನು ಹೊರಗೆ ತರವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೆÃಶವಾಗಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಜೆ. ಹೆಗಡಿಹಾಳ ಹೇಳಿದರು.
ತಾಲೂಕಿನ ಕೊಡಗಾನೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಹಿರಿಯ ಪ್ರಾಥಮಿಕಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಭಾ ಕಾರಂಜಿಯಂತಹ ಕರ‍್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡುವ ಕಾರ್ಯವಾಗಬೇಕು, ಮಕ್ಕಳ ಸರ್ವತೋಮುಖ ಬೆಳವಣೆಗೆಗೆ ಪಾಲಕರು ಶಿಕ್ಷಕರು ಪ್ರೊÃತ್ಸಾಹಿಸಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಮಾದರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ತನ್ನದೆ ಆದ ಪ್ರತಿಭೆ ಅಡುಗಿರುತ್ತದೆ ಅವರ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ವೇದಿಕೆಯಲ್ಲಿ ಪ್ರದರ್ಶಿಸಲು ಪ್ರೊÃತ್ಸಾಹಿಸಬೇಕು, ಶಾಲಾಮಟ್ಟದಲ್ಲಿ ಇಂತಹ ಪ್ರತಿಭೆಗಳನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಕರ‍್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಯಮನಪ್ಪಗೌಡ ಗುಡದಿನ್ನಿ ಉದ್ಘಾಟಿಸಿದರು, ಬಾಪುಸಾಬ ದಿಂಡವಾರ ಅಧ್ಯಕ್ಷತೆವಹಿಸಿದರು. ಕಣಕಾಲ ಗ್ರಾಪಂ ಅಧ್ಯಕ್ಷೆ ಅಮೀನಾ ಬೀಳಗಿ, ಗ್ರಾಪಂ ಸದಸ್ಯರಾದ ಶಿವಶಂಕರಯ್ಯ ಹಿರೇಮಠ, ಶಿವು ರಾಠೋಡ, ಹಸನಪಟೇಲ ಶಿವಣಗಿ, ಕ್ಷೆÃತ್ರ ಸಂಪನ್ಮೂಲವ್ಯಕ್ತಿ ಪಿ.ಆರ್.ಮಂಚ, ಎಸ್.ಬಿ. ತಾಂಬೋಲಿ, ಕ.ರಾ.ಪ್ರಾ.ಶಿ.ಸಂಘದ ಪ್ರಧಾನ ಕರ‍್ಯದರ್ಶಿ ಎ.ಎಂ.ಹಳ್ಳೂರ, ಹಬೀಬ ಮುಲ್ಲಾ, ರಾಜೇಸಾಬ ಹಡಗಿನಾಳ, ಮು.ಗು. ಎಸ್.ಆಯ್. ಬಡಿಗೇರ, ಎಸ್.ಎ.ಮಕಾದಾರ, ಚಿಮ್ಮನಕಟ್ಟಿ, ಎಂ.ಎ.ಮುಲ್ಲಾ ಸೇರಿದಂತೆ ಇತರರು ಇದ್ದರು. ಎಸ್.ಐ. ಮನಗೂಳಿ ಸ್ವಾಗತಿಸಿದರು, ಎಸ್.ಜಿ.ಬಾಗೇವಾಡಿ ನಿರೂಪಿಸಿದರು, ಸಿ.ಎ.ಭಕ್ಷಿ ವಂದಿಸಿದರು.

ಇದೇ ಸಂದರ್ಭದಲ್ಲಿ ಆರ್.ಎಂ.ತಮದಡ್ಡಿ, ಜಿ.ಬಿ. ಬಾಗೇವಾಡಿ, ಎಚ್.ಎಂ.ಮಕಾದಾರ, ಬಿ.ಎಲ್.ಪವಾರ, ಪಿ.ಎಸ್.ಕಾಳಗಿ, ಎಲ್.ಎನ್.ಇವಣಗಿಗೆ ಸನ್ಮಾನಿಸಲಾಯಿತು.

loading...