ಖೋಟಾ ನೋಟು ಸರಬುರಾಜು ಜಾಲ ತಂಡ ಪತ್ತೆ ಇಬ್ಬರು ಪ್ರಮುಖ ಆರೋಪಿಗಳ ಬಂಧನ : ೧೬ಲಕ್ಷ ಖೋಟಾ ನೋಟು ವಶ

0
11
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಖೋಟಾ ನೋಟು ಸರಬುರಾಜು ಜಾಲ ತಂಡವನ್ನು ಪತ್ತೆ ಹಚ್ಚಿ ಇಬ್ಬರನ್ನು ಪ್ರಮುಖ ಆರೋಪಿಗಳನ್ನು ಬಂಧಿಸಿ ಕೋಟಾ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಳ್ಳುವಲ್ಲಿ ಕೊಪ್ಪಳ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಶುಕ್ರವಾರ ಈ ಕುರಿತು ಪ್ರಕಟನೆ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿಯವರು ಬಂಧಿತ ಆರೋಪಿಗಳಲ್ಲಿ ಅನಂತಪÇರ ಮೂಲದ ಬೆಂಗಳೂರು ನಿವಾಸಿ ಅಬ್ದುಲ್ ರೆಹಮಾನ್ (೩೯), ಹಾಗೂ ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಎಂ.ಎ.ಅಮ್ಜದ್ (೪೪) ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವರೆ ತಿಂಗಳಿಂದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಕೋಟಾ ನೋಟು ಬೆದರಿಕೆ ಪತ್ರ ನೀಡಿ ೯ ಜನ ಸ್ಥಳೀಯ ಆರೋಪಿಗಳು ಸಿಸಿಕ್ಕು ಬಂದಿಯಾಗಿದ್ದಾರೆ. ಆದರೆ ಈ ಆರೋಪಿಗಳ ಮಾಹಿತಿ ಆಧಾರಿಸಿ ತನಿಖೆ ಮುಂದುವರೆಸಿದ್ದ ಕೊಪ್ಪಳ ಡಿಸಿಬಿ ಪಿಐಗಳಾದ ಸೋಮಶೇಖರ ಜುಟ್ಟಲ್, ರಾಜಕುಮಾರ ವಾಜೇಂತ್ರಿ, ತಂಡವು ಚೆನ್ನ್ಯ ಮಹಾನಗರ ಹೊರ ವಲಯದ ನಿವಾಸದ ಮೇಲೆ ದಾಳಿ ನಡೆಸುವ ಮೂಲಕ ಇಬ್ಬರನ್ನು ಪ್ರಮುಖ ಅರೋಪಿಗಳನ್ನು ಬಂಧಿಸಿ, ಪ್ರಕರಣ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನ್ಯ ಮಹಾನಗರದ ಹೊರ ವಲಯದ ನಿವಾಸದ ಮೇಲೆ ದಸ್ತಗಿರಿ ನಡೆಸುವ ಮೂಲಕ ಪ್ರಕರಣ ಬಯಲಿಗೆಳೆಯುವಲ್ಲಿ ಪೆÇಲೀಸರು ಯಶಸ್ವಿ ಇಬ್ಬರು ಪ್ರಮುಖ ಆರೋಪಿಗಳಲ್ಲದೆ, ಬಳ್ಳಾರಿ ಮೂಲದ ೧೦ ಜನ ಆರೋಪಿಗಳ ಬಂಧನ ಸ್ಕಾ್ಯನರ್, ಪ್ರಿಂಟರ್, ಕಂಪÇ್ಯಟರ್, ಪೇಪರ್, ಅಚ್ಚು, ಇಂಕ ಬಾಟಲಿ, ೨೦೦೦ ಹಾಗೂ ೫೦೦ ಮುಖ ಬೆಲೆ ನೋಟುಗಳ ೧೬ ಲಕ್ಷ ರೂಪಾಯಿಗಳು ಸೇರಿದಂತೆÉ ಪ್ರಮುಖ ದಾಖಲೆಗಳ ವಶ ಕಲಂ ೧೨೦ (ಬಿ), ೪೮೯ ಎ. ಬಿ. ಸಿ, ೫೦೬, ೫೦೭, ೩೪ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇನ್ನಷ್ಟು ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ. ಅನೂಪಶೆಟ್ಟಿ ತಿಳಿಸಿದ್ದಾರೆ.

loading...