ಗೀತಾಧಾರದ ಶಿಕ್ಷಣ ಪದ್ಧತಿ ಬರಲಿ: ಶಾಂತಲಕ್ಷಿö್ಮ

0
11
loading...

ಬೆಳಗಾವಿ: ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಸಂಗೀತಾಧಾರದಿಂದಲೇ ಕಲಿಸುವ ಒಂದು ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಇದರಿಂದ ಶಿಕ್ಷಕರ ಕಲಿಕೆ ಗುಣಮಟ್ಟ ಕೂಡ ಹೆಚ್ಚುತ್ತದೆ ಅಲ್ಲದೇ ವಿದ್ಯಾರ್ಥಿಗಳೂ ಬೇಗನೇ ಅರಗಿಸಿಕೊಳ್ಳಲು ಸಾಧ್ಯವಿದೆ ಸಂಗೀತದಲ್ಲಿ ಆ ಒಂದು ಶಕ್ತಿ ಅಡಗಿದೆ. ಶಿಕ್ಷಕಿಯಾಗಿರುವ ನಾನು ನನ್ನ ಸೇವಾವಧಿಯಲ್ಲಿ ಕಂಡುಕೊಂಡ ಸತ್ಯವಿದೆಂದು ಕರ್ನಾಟಕ ಹೆಸರಾಂತ ಕಲಾವಿದೆ ವಿದೂಷಿ ಶಾಂತಲಕ್ಷಿö್ಮ ನಾಗೇಂದ್ರನಾಥ ಇಂದಿಲ್ಲಿ ಹೇಳಿದರು.
ನಗರದ ಬೆನಕನಹಳ್ಳಿಯ ರವಿಶಂಕರ ವಿದ್ಯಾಮಂದಿರದಲ್ಲಿ ಗುರುವಂದನಾ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಹೆಸರಾಂತ ಸಂಗೀತ ಕಲಾವಿದೆ ವಿದೂಷಿ ಶ್ರಿÃಮತಿ ಶಾಂತಲಕ್ಷಿö್ಮ ನಾಗೇಂದ್ರನಾಥ ಮೇಲಿನಂತೆ ಅಭಿಪ್ರಾಯ ಪಟ್ಟರು.
ಇನ್ನೊÃರ್ವ ಅತಿಥಿ ನಾದಸುಧಾ ಸುಗಮಸಂಗೀತ ಶಾಲೆಯ ಸಂಸ್ಥಾಪಕರಾದ ಸತ್ಯನಾರಾಯಣ ಅವರು ಮಾತನಾಡುತ್ತ ಎಲ್ಲ ಮಕ್ಕಳೂ ತಮ್ಮ ಅಭ್ಯಾಸದ ಜೊತೆಗೆ ಸಂಗೀತಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಇಂಥ ಹವ್ಯಾಸಗಳನ್ನು ಬೆಳೆಸಿಕೊಳ್ಳುವವರು ಕ್ರಿಯಾಶೀಲರಾಗಿ ಚಟುವಟಿಕೆಯುವಳ್ಳವರಾಗಿರತ್ತಾರೆ. ಶಾಲಾಭ್ಯಾಸದಲ್ಲಿಯೂ ಮುಂದಿರುತ್ತಾರೆಂದು ಹೇಳಿದ ಅವರು ‘ಗುರು ಹಮಾರಾ ಮನಮಂದಿರ ಮೆ…’ ಎನ್ನುವ ಹಾಡನ್ನು ಮಕ್ಕಳಿಗೆ ಹೇಳಿಕೊಟ್ಟರು.
ರವಿಶಂಕರ ವಿದ್ಯಾಮಂದಿರದ ಪ್ರಾಂಶುಪಾಲರಾದ ಉಜ್ವಲಾ ದೇಶಪಾಂಡೆ ಕರ‍್ಯಕ್ರಮ ಆಯೋಜಿಸಿದ್ದರು. ಶಿಕ್ಷಕಿಯರಾದ ಗಿರಿಜಾ ಹಾಲಗಿ, ಧನಶ್ರಿÃ ರಾನಡೆ, ಪ್ರಣಾಲಿ, ಮನಿಷಾ, ಅನಿತಾ, ರೋಹಿಣಿ ಸಹಕರಸಿದರು. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲ ಸಿಬ್ಬಂಧಿವರ್ಗ ಪಾಲ್ಗೊಂಡಿದ್ದರು. ಕು. ಪ್ರತೀಕ ವಂದಿಸಿದರು.

loading...