ಗುಟ್ಟಾಗಿ ನಡೆದಿದೆ ಪ್ರಿಯಾಂಕ-ನಿಕ್ ನಿಶ್ಚಿತಾರ್ಥ

0
21
loading...

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಹಾಡುಗಾರ ನಿಕ್ ಜೋನಸ್ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಪ್ರೇಮಿಗಳಾಗಿದ್ದವರು ಉಂಗುರ ಬದಲಿಸಿಕೊಂಡಿದ್ದಾರೆ. ಪೀಪಲ್ ಡಾಟ್ ಕಾಂ ವರದಿ ಪ್ರಕಾರ ಪ್ರಿಯಾಂಕ ಹುಟ್ಟುಹಬ್ಬದ ವೇಳೆ ನಿಕ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರಂತೆ.

ನಿಕ್ ನಿಶ್ಚಿತಾರ್ಥದ ಉಂಗುರವನ್ನು ನ್ಯೂಯಾರ್ಕ್ ನ ಟಿಫನಿ ಮಳಿಗೆಯಲ್ಲಿ ಖರೀದಿ ಮಾಡಿದ್ದಾರಂತೆ. ಪ್ರಿಯಾಂಕ ಚೋಪ್ರಾ 36ನೇ ಹುಟ್ಟುಹಬ್ಬದಂದು ಲಂಡನ್ ನಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರಂತೆ. ಎರಡು ತಿಂಗಳ ಕಾಲ ಡೇಟಿಂಗ್ ನಲ್ಲಿದ್ದ ಜೋಡಿ ನಂತ್ರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಿಯಾಂಕರನ್ನು ಪ್ರೀತಿ ಮಾಡ್ತಿರುವ ನಿಕ್ ನಿಶ್ಚಿತಾರ್ಥದ ನಂತ್ರ ತುಂಬಾ ಖುಷಿಯಾಗಿದ್ದಾರಂತೆ. ಈವರೆಗೆ ನಿಕ್ ಇಷ್ಟು ಖುಷಿಯಾಗಿರೋದನ್ನು ನಾವು ನೋಡಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

ನಿಶ್ಚಿತಾರ್ಥದ ಸುದ್ದಿ ಹೊರ ಬರ್ತಿದ್ದಂತೆ ಮದುವೆ ದಿನಾಂಕದ ಬಗ್ಗೆಯೂ ಸುದ್ದಿ ಬಂದಿದೆ. ಅಕ್ಟೋಬರ್ ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಪಿಗ್ಗಿ, ಅಲಿ ಅಬ್ಬಾಸ್ ನಿರ್ದೇಶನದ ಭಾರತ್ ಚಿತ್ರ ಕೈ ಬಿಟ್ಟಿದ್ದಾರೆ.

loading...