ಗುಡಿಸಲು ಮುಕ್ತ ದೇಶ ಮಾಡುವುದು ಪ್ರಧಾನಿ ಮೋದಿ ಸಂಕಲ್ಪ

0
32
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ದೇಶವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಿದ್ದು, ವಿವಿಧ ವಸತಿ ಯೋಜನೆಯಡಿ ಬಡವರಿಗಾಗಿ, ನಿವೇಶನ, ವಸತಿ ರಹಿತರಿಗೆ ಈ ಅನುಕೂಲ ಕಲ್ಪಿಸಿ, ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷ ಅಮರೇಶ್‌ ಕರಡಿ ಹೇಳಿದರು.
ಶನಿವಾರ ಸಂಜೆ ಕೊಪ್ಪಳ ನಗರದ ಭಾರತ್‌ ಗ್ಯಾಸ್‌ ಅಂಗಡಿ ಬಳಿ ಆಯೋಜಿಸಿದ್ದ ತಾಲೂಕಿನ ಚುಕನಕಲ್‌, ಚಿಲವಾಡಗಿ, ಓಜಿನಹಳ್ಳಿ, ಯತ್ನಟ್ಟಿ ಹಾಗೂ ನಗರದ ವಿವಿಧ ವಾರ್ಡ್‌ಗಳ ಫಲಾನುಭವಿಗಳಿಗೆ ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ್‌ಕಿಟ್‌ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದುವರೆಗೂ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಗುಡಿಸಲು ಮುಕ್ತ ದೇಶ ಮಾಡಲು ಮುಂದಾಗದೇ ಕೇವಲ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಆದರೆ ದೇಶದ ಬಡಜನತೆ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಮೋದಿಯವರು ಇಂದು ವಿವಿಧ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ಧಿಪಥದತ್ತ ತೆಗೆದುಕೊಂಡು ಹೊರಟಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರು, ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಂದ್ರಸ್ವಾಮಿ ಬಹದ್ದೂರಬಂಡಿ, ಯುವ ಮುಖಂಡ ಗಣೇಶ್‌ ಹೊರತಟ್ನಾಳ, ಶ್ರೀನಿವಾಸ ಪೂಜಾರ, ಬಸವರಾಜ ಮಿಠಾಯಿ, ಭಾರತ್‌ ಗ್ಯಾಸ್‌ ಏಜೆನ್ಸಿ ಪ್ರೊಪ್ರೈಟರ್‌ ರಾಘವೇಂದ್ರ ಕುಲಕರ್ಣಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

loading...