‘ಗುಬ್ಬಿ’ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ

0
18
loading...

‘ಗುಬ್ಬಿ’ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ
‘ಗುಬ್ಬಿ’ಗಳಿಗೆ ಆಶ್ರಯ ನೀಡಿದ ಗುಜನಾಳ ವಲಯ ಅರಣ್ಯಾಧಿಕಾರಿ ಸಂಗಮೇಶ..!
* ಇವರ ಮನೆಯಂಗಳ ಗುಬ್ಬಚ್ಚಿಗಳ ಆಶ್ರಯ ತಾಣ * ಮನೆಯ ಸುತ್ತಲೂ ಗುಬ್ಬಿಗಳ ಕಲರವ ಸದ್ದು *
* ಪಕ್ಷಿಗಳಿಗೆ ಕುಡಿಯಲಿಕ್ಕೆ ನೀರು, ಕಾಳು ಕಡಿ ಹಾಕುತ್ತಿರುವ ಅಪರೂಪದ ಪಕ್ಷಿಪ್ರೀಯ

ಅಡಿವೇಶ ಮುಧೋಳ ಬೆಟಗೇರಿ
ಇತ್ತಿಚಿನ ದಿನಗಳಲ್ಲಿ ಪರಿಸರ ವಿನಾಶ ಹೊಂದುತ್ತಿರುವದಿಂದ ಪ್ರಾಣಿ, ಪಕ್ಷಿಗಳು ಪರದಾಡುವ ದುಸ್ಥಿತಿ ಒಂದಡೆಯಾದರೆ, ಮೊಬೈಲ್‌ ಟಾವರ್‌ ನಿರ್ಮಾಣದಂತಹ ವಿಜ್ಞಾನ ಮತ್ತು ತಂತ್ರಜ್ಞಾನ ತೀವ್ರ ಬೆಳವಣಿಗೆ ಹಿನ್ನಲೆಯಲ್ಲಿ ಪಕ್ಷಿಗಳ ಸಂಕುಲ ಅವನತಿಯತ್ತ ಹಜ್ಜೆ ಹಾಕಿವೆ ಅಂಬುವದು ಅಷ್ಟೇ ನಿಜ.! ಅವುಗಳಿಗೆ ನೈಸರ್ಗಿಕ ವಾತಾವರಣ ಸಿಗದಿರುವುದು ಹಾಗೂ ವಾಸಿಸಲು, ಹೊಟ್ಟೆಪಾಡಿಗಾಗಿ ಪಕ್ಷಿಗಳ ವಲಸೆ, ಅಲೆದಾಟದಿಂದ ಇಂದು ವಿವಿಧ ಜಾತಿಯ ಪಕ್ಷಿಗಳ ಸಂತತಿ ನಮ್ಮಿಂದ ಕಣ್ಮರೆಯಾಗುತ್ತಿವೆ. ಅದರಲ್ಲೂ ಗುಬ್ಬಿಗಳ ಸಂತತಿ ಸಂಪೂರ್ಣ ವಿನಾಶದ ಅಂಚಿನಲ್ಲಿವೆ.
ಮನೆಯ ಮಣ್ಣಿನ ಗೊಡೆಗಳಲ್ಲಿ, ಬಿದಿರು, ಹಂಚಿನ ಮನೆ ಹಾಗೂ ಸಣ್ಣ ಸಣ್ಣ ಗಿಡಗಂಟ್ಟಿಗಳಲ್ಲಿ ಚಿಂವ್‌…ಚಿಂವ್‌…ಕಲರವ ಮಾಡುತ್ತಿದ್ದ ಚಿಕ್ಕ ಮಕ್ಕಳ ಬಹುಪ್ರೀಯ ಮನೆಯ ಪಕ್ಷಿ ಎಂದು ಹೆಸರಾಗಿರುವ ಗುಬ್ಬಿಗಳ ಸಂತತಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವದನ್ನು ಅರಿತ ಕುಂದಾನಗರಿ ಬೆಳಗಾವಿ ಮಹಾನಗರದ ಕುಮಾರಸ್ವಾಮಿ ಲೇ ಔಟ್‌ನಲ್ಲಿ ವಾಸವಾಗಿರುವ ಕರದಂಟುರೂ ಗೋಕಾಕ ತಾಲೂಕಿನ ಗುಜನಾಳ ವಲಯದ ಅರಣ್ಯ ಇಲಾಖೆಯ ವಲಯಾಧಿಕಾರಿ ಸಂಗಮೇಶ ಎನ್‌. ಪ್ರಭಾಕರ ಅವರು ತಮ್ಮ ಮನೆಯಂಗಳದಲ್ಲಿರುವ ಗಿಡ, ಮನೆಯ ಅಕ್ಕ-ಪಕ್ಕ ಪಕ್ಷಿಗಳ ವಾಸಕ್ಕೆ ಅನುಗುಣವಾಗಿ ನೈಸರ್ಗಿಕ ಪರಿಸರ, ಪಕ್ಷಿಗಳ ಇರುವಿಕಾಗಿ ಮಾನವ ನಿರ್ಮಿತ ಗುಬ್ಬಚ್ಚಿ ಗೂಡುಗಳನ್ನು ಹಾಕಿ ಬಡ್ಸ್‌ರ್ ನೇಸ್ಟ್‌, ಬಡ್ಸ್‌ರ್ ಪೀಡರ್‌, ಬಡ್ಸ್‌ ಬಾತ್‌ ತೊಟ್ಟಿಗಳನ್ನು ಅಳವಡಿಸಿ ಗಾರ್ಡಿನಿಂಗ್‌ ಮಾಡುವ ಮೂಲಕ ಬಡ್ಸ್‌ರ್ ಹಬಿಟೆಟ್‌ ಆಶ್ರಯ ತಾಣ ನಿರ್ಮಿಸಿ, ನೀರು, ಅನ್ನ ಹಾಕಿ ಗುಬ್ಬಚ್ಚಿಗಳ ಪಕ್ಷಿ ಪ್ರೇಮಿ ಎನಿಸಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪೂರ ಮಹಾಲಕ್ಷ್ಮೀ ದರ್ಶನಕ್ಕೆ ಹೋದಾಗ ಅಲ್ಲಿ ಮಾನವ ನಿರ್ಮಿತ ಕೃತಕ ಗುಬ್ಬಚ್ಚಿ ಗೂಡುಗಳನ್ನು ಖರೀದಿಸಿ ತಂದ ಬಳಿಕ ಒಂದೂಂದಾಗಿ ಅವುಗಳಿಗೆ ಬೇಕಾದ ಹಲವು ಸಾಮಗ್ರಿಗಳನ್ನು ತಂದು ಮನೆಯಂಗಳದಲ್ಲಿ ನಿರ್ಮಿಸಿದ ಸುಮಾರು ಒಂದು ವರ್ಷ ಗತಿಸಿದರೂ ಒಂದು ಗುಬ್ಬಿಯೂ ಸಹ ಈ ಮಾನವ ನಿರ್ಮಿತ ಗೂಡುಗಳತ್ತ ಸುಳಿಯಲ್ಲ.!
ಇಂದು ಕಣ್ಣಿಗೆ ಅಪರೂಪವಾಗಿರುವ ಗುಬ್ಬಿಗಳನ್ನು ನೇಸ್ಟ್‌ಗೆ ಸೆಳೆದಿರುವ ಅರಣ್ಯಾಧಿಕಾರಿ ಸಂಗಮೇಶ ಅವರ ಮನೆಯ ಆವರಣಕ್ಕೆ ನಂತರದ ದಿನಗಳಲ್ಲಿ ಒಂದೂಂದಾಗಿ, ಒಂದಿಷ್ಟು ಹಿಂಡುಗಟ್ಟಲೆ ಗುಬ್ಬಿಗಳು ನಿತ್ಯ ಬಡ್ಸ್‌ ನೇಸ್ಟ್‌ಗೆ ಬರತೊಡಗಿದಾಗ ಅವುಗಳಿಗೆ ಕುಡಿಯಲಿಕ್ಕೆ ನೀರು, ಅನ್ನಕ್ಕಾಗಿ ಕಾಳು ಕಡಿ ಹಾಕುತ್ತಿರುವದರಿಂದ ಇಂದು ಕೊಲ್ಲಾಪೂರದಿಂದ ತರಲಾಗಿದ್ದ ನೈಸರ್ಗಿಕ ನೇಸ್ಟ್‌ ಈಗ ಗುಬ್ಬಿಗಳ ಮನೆಯಾಗಿ ಪರಿವರ್ತನೆಯಾಗಿದ್ದು, ಗುಬ್ಬಚ್ಚಿಗಳು ತಾ..ಮುಂದೂ…ನಾ..ಮುಂದು ಅಂತಾ ಅವುಗಳಲ್ಲಿಯೇ ಡಾಮೇನೆಟ್‌ ಸ್ಪರ್ಧೆಯ ಮೂಲಕ ಗೂಡು ಸೇರುತ್ತವೆ. ಗುಬ್ಬಚ್ಚಿಗಳು ಇಲ್ಲಿ ಬಂದು ಹೋಗುವುದಲ್ಲದೇ, ವಾಸವಾಗಿರುವದರಿಂದ ಮನೆಯ ಸುತ್ತಲೂ ಗುಬ್ಬಚ್ಚಿಗಳ ಕಲರವ ಸದ್ದು ಸದಾ ಕೇಳುತ್ತಿರುತ್ತದೆ. ಹೀಗಾಗಿ ಅರಣ್ಯಾಧಿಕಾರಿ ಸಂಗಮೇಶ ಎನ್‌. ಪ್ರಭಾಕರ ಅವರ ಮನೆಯಂಗಳ ಪಕ್ಷಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ನಾನು ನನ್ನ ಕರ್ತವ್ಯದ ಬಿಡುವಿನ ವೇಳೆಯಲ್ಲಿ ಗುಬ್ಬಚ್ಚಿ ಪಕ್ಷಿಗಳನ್ನು ಬಹು ಕಾಳಜಿ, ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಮನೆಯ ಆವರಣದಲ್ಲಿರುವ ಗಿಡ, ಗಂಟಿ, ಬಗೆ ಬಗೆಯ ಹೂ ಗಿಡಗಳ ನೀರು ಹಾಕಿ ಹಚ್ಚ ಹಸಿರಿರುವಂತೆ ಹಾಗೂ ಗುಬ್ಬಚ್ಚಿಗಳಿಗೆ ನೀರು, ಕಾಳು, ಕಡಿ ಹಾಕುವ ನಿತ್ಯ ಕಾಯಕದಲ್ಲಿ ನನ್ನ ಮಕ್ಕಳಾದ ಪ್ರೇರಣಾ, ಪ್ರತೀಕ್ಷಾ ಹಾಗೂ ಪತ್ನಿ ಗೀತಾ ಗುಬ್ಬಚ್ಚಿ ಪಕ್ಷಿ ಸಂಕುಲ ಉಳಿವಿಗಾಗಿ ನನ್ನ ಜೋತೆ ಕೈ ಜೋಡಿಸಿ ಕಾಯಕ ನಿರತ ಸಹಾಯಕವಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಆರ್‌ಎಫ್‌ಒ ಸಂಗಮೇಶ ಅವರು ಹೇಳುವ ಮಾತು.

loading...