ಗೂಗಲ್ ಕೆಲಸ ಬಿಟ್ಟು ಸಮೋಸಾ ಮಾರಾಟಕ್ಕಿಳಿದವನ ಯಶಸ್ಸಿನ ಕಥೆ

0
11
loading...

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾರನ್ನೇ ಕೇಳಿ ಗೂಗಲ್ ನಲ್ಲಿ ಕೆಲಸ ಮಾಡುವುದು ನಮ್ಮ ಕನಸು ಎನ್ನುತ್ತಾರೆ. ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಮೇಲೆ ಇಡೀ ಜೀವನ ಶಾಂತಿಯಿಂದ ಹಾಗೂ ಆರಾಮದಾಯಕವಾಗಿರುತ್ತದೆ ಎಂಬುದು ಅವ್ರ ನಂಬಿಕೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಕೆಲಸ ಯಾರಿಗೆ ಬೇಡ ಹೇಳಿ. ಆದ್ರೆ ಈ ವ್ಯಕ್ತಿ ಕೈತುಂಬ ಬರ್ತಿದ್ದ ಸಂಬಳ ಬಿಟ್ಟು ಸಮೋಸಾ ತಯಾರಿಸುವ ಕೆಲಸಕ್ಕೆ ಕೈ ಹಾಕಿದ. ಆರಂಭದಲ್ಲಿ ಈತನನ್ನು ಮೂರ್ಖ ಎಂದವರು ಒಂದು ವರ್ಷದಲ್ಲಿ 50 ಲಕ್ಷ ವಹಿವಾಟು ನೋಡಿ ಮನಸ್ಸು ಬದಲಿಸಿದ್ದಾರೆ.

ನಾವು ಹೇಳ್ತಿರುವ ವ್ಯಕ್ತಿ ಬೇರ್ಯಾರೂ ಅಲ್ಲ, ದಿ ಬೋಹಾರಿ ಕಿಚನ್ ಮಾಲೀಕ ಮುನಾಫ್ ಕಪಾಡಿಯಾ. ಮುಂಬೈನ ಮುನಾಫ್ ಎಂಬಿಎ ಮುಗಿಸಿ ಅನೇಕ ಕಡೆ ಕೆಲಸ ಮಾಡಿದ್ದಾರೆ. ನಂತ್ರ ವಿದೇಶಕ್ಕೆ ತೆರಳಿ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅನೇಕ ವರ್ಷಗಳ ಕಾಲ ಗೂಗಲ್ ನಲ್ಲಿ ಕೆಲಸ ಮಾಡಿದ ಮುನಾಫ್ ಹೊಸದನ್ನು ಮಾಡುವ ಆಶಯ ಹೊಂದಿದ್ದರು. ಇದೇ ಕಾರಣಕ್ಕೆ ದೇಶಕ್ಕೆ ವಾಪಸ್ ಆದ ಮುನಾಫ್ ಅಮ್ಮನಿಂದ ಪ್ರೇರಿತರಾಗಿ ರೆಸ್ಟೋರೆಂಟ್ ತೆರೆದ್ರು.

ಮುನಾಫ್ ಬೋಹಾರಿ ಕಿಚನ್ ನಲ್ಲಿ ಸಮೋಸಾ ಜೊತೆ ಬೇರೆ ಬೇರೆ ತಿಂಡಿಗಳನ್ನು ಮಾರಾಟ ಮಾಡ್ತಾರೆ. ಒಂದು ವರ್ಷಕ್ಕೆ 50 ಲಕ್ಷ ವಹಿವಾಟು ನಡೆಸಿರುವ ಮುನಾಫ್ ಇದನ್ನು 3-5 ಕೋಟಿಗೆ ಏರಿಸುವ ಆಲೋಚನೆಯಲ್ಲಿದ್ದಾರೆ. ಫೈವ್ ಸ್ಟಾರ್ ರೆಸ್ಟೋರೆಂಟ್ ನಿಂದ ಹಿಡಿದು ಬಾಲಿವುಡ್ ಸೇರಿದಂತೆ ದೇಶದ ಅನೇಕ ಕಡೆ ಬೋಹಾರಿ ಕಿಚನ್ ಸಮೋಸಾ ಪ್ರಸಿದ್ಧಿ ಪಡೆದಿದೆ.

loading...