ಗೋಮಾಳ ಜಾಗ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

0
14
loading...

 

ಕನ್ನಡಮ್ಮ ಸುದ್ದಿ- ಬೆಳಗಾವಿ: ಗೋಮಾಳ ಜಮೀನ ರಿ.ನಂ ೨೦೨ ರಿಂದ ೨೦೮ ವರೆಗೆ ಕಾಲಿ ಇರುವ ಜಮೀನುಗಳಲ್ಲಿ ಗ್ರಾಮಸ್ಥರ ಹಕ್ಕುಗಳನ್ನು ಸಂರಕ್ಷಿಸುವಂತೆ ಆಗ್ರಹಿಸಿ ಜಿಜಗರ್ಣಿಯ ಗ್ರಾಮಸ್ಥರ ಮಂಡಳಿಯ ವತಿಯಿಂದ ಪ್ರತಿಭಟನೆ ನಡೆಸಿದರು.

ನಗರದ ಚನ್ನಮ್ಮ ಸರ್ಕಲ್ ದಿಂದ ಜಿಲ್ಲಾಧಿಕಾರಿಗಳವರೆಗೆ ವಸಂತ ಅಷ್ಟೇಕರ ಅವರು ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಹದ್ದಿನಲ್ಲಿರುವ ಗೋಮಾಳ ಜಾಗವನ್ನು ರುಕ್ಮಣ್ಣಾ ಶಾಂತು ಕಾಂಬಳೆ, ಮಾರುತಿ ಕಾಂಬಳೆ, ಮಹದೇವ ಕಾಂಬಳೆ, ಅರ್ಜುನ ಕಾಂಬಳೆ, ಈರಣ್ಣಾ ಕಾಂಬಳೆ ಅತೀಕ್ರಮಣ ಮಾಡಿಕೊಳ್ಳುತ್ತಿದ್ದು ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಟ್ಯಾಕ್ಟರ್,ಟೆಂಪೋಗಳ ಸೇರಿದಂತೆ ಸು.೨೦೦ ಕ್ಕೂ ಹೆಚ್ಚು ಜನರು ಪ್ರತಿಭಟನೆ ಯಲ್ಲಿ ಭಾಗಿಯಾಗಿದ್ದರು.

loading...