ಗ್ರಾಮಸ್ಥರಲ್ಲಿ ಕಿರಿಕಿರಿ ಉಂಟುಮಾಡಿದ ಸೂಸುವ ಹುಳಗಳು

0
8
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ಕೂರ್ಲಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಹೊರವಲಯದಲ್ಲಿ ಕಾಣಿಸಿಕೊಂಡ ವಿಚಿತ್ರ ವಾಸನೆ ಸೂಸುವ ಹುಳಗಳು ಸದ್ಯ ಗ್ರಾಮಕ್ಕೆ ಕಾಲಿಟ್ಟಿದ್ದು ಗ್ರಾಮಸ್ಥರಲ್ಲಿ ಕಿರಿಕಿರಿ ಮತ್ತು ತೀವ್ರ ಆತಂಕವನ್ನು ಉಂಟುಮಾಡಿದೆ.
ಈ ವಿಚಿತ್ರ ವಾಸನೆ ಹುಳಗಳು ಕಳೆದ ಒಂದು ತಿಂಗಳಿಂದ ಕೂರ್ಲಿಯ ಹೊರ ಭಾಗದ ಗಿಡಮರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಂಡುಬಂದಿತ್ತು. ಆದರೆ ಸದ್ಯ ಇದು ಕೂರ್ಲಿ ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಪಕ್ಕದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಗೊಡೆಯ ಮೇಲೆ ಮತ್ತು ಆವರಣದ ಗಿಡಮರಗಳಲ್ಲಿ ಬಿಡು ಬಿಟ್ಟಿದೆ. ಈ ಹುಳವು ಕೆಟ್ಟ ವಾಸನೆಯಿಂದ ಕೂಡಿದ್ದು ಇದರಿಂದ ಶಾಲಾ ಮಕ್ಕಳು ಮತ್ತು ಊರಿನ ಜನ ಬೇಸತ್ತು ಹೋಗಿದ್ದಾರೆ. ಅಂಗನವಾಡಿ ಹಾಗೂ ಶಾಲೆಯ ಬಿಸಿಯೂಟದಲ್ಲಿ ಹುಳಗಳು ಬಿಳುತ್ತಿವೆ ಮಕ್ಕಳಿಗೆ ಊಟ ಮಾಡಲಾಗುತ್ತಿಲ್ಲಾ, ಹುಳಗಳು ಕುಡಿಯುವ ನೀರಿನ ಬಾವಿಗೆ ಬಿದ್ದು ಕುಡಿಯಲು ಬರುತ್ತಿಲ್ಲಾ. ಕೆಲವೊಮ್ಮೆ ರಾಶಿಗಟ್ಟಲೆ ಹುಳಗಳು ಮನೆಯ ಒಳಗೂ ಬರುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗಿದೆ.
ಈ ಹುಳವು ರಾತ್ರಿ ಸಮಯದಲ್ಲಿ ಜಾಗ ಬದಲಾಯಿಸುತ್ತಿರುವ ವೇಳೆ ಭಾರಿ ಸಪ್ಪಳ ಮಾಡುತ್ತಿವೆ. ಒಟ್ಟಿನಲ್ಲಿ ಈ ಹುಳಗಳಿಂದ ಸ್ಥಳಿಯರು ರೋಷಿ ಹೋಗಿದ್ದಾರೆ. ಆದರೆ ಇದುವರೆಗೂ ಆರೋಗ್ಯ ಇಲಾಖೆಯವರು ಬೇಟಿ ನೀಡಿ ಈ ಹುಳಗಳ ಬಗ್ಗೆ ಪರಿಶೀಲಿಸಿ ಗ್ರಾಮಸ್ಥರಿಗೆ ಆತಂಕದಿಂದ ದೂರಮಾಡಿ ದೈರ್ಯ ತುಂಬುವ ಕೆಲಸ ಮತ್ತು ಸಲಹೆ ಸೂಚನೆ ನೀಡಿಲ್ಲಾ ಎಂಬುವದು ಈ ಗ್ರಾಮದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೂರ್ಲಿ ಗ್ರಾಮದ ನಿವಾಸಿ ಸಣ್ಣಪಕ್ಕಿರಪ್ಪ ಮೇಲಿನಕೇರಿ, ಈ ಕುರಿತು ಮಾತನಾಡಿ,ಈ ವಿಚಿತ್ರ ವಾಸನೆ ಹುಳಗಳು ಸೂಸುವ ಹುಳಗಳು ಮನೆಯ ಹಿತ್ತಲದಲ್ಲಿ ಬೆಳೆದ ಹಣ್ಣು ಹಂಪಲ, ತರಕಾರಿ ಗಿಡದಲ್ಲಿ ಕುಳಿತು ತುಂಬಾ ಹಾನಿಮಾಡಿವೆ ನಮ್ಮೂರಿನ ಜನರಿಗೆ ಈ ಹುಳವಿನಿಂದ ತೀವ್ರ ತೊಂದರೆಯಾಗುತ್ತಿದೆ ಈ ಬಗ್ಗೆ ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎಂದರು. ಬೆಡಸಗಾಂವ ಗ್ರಾಮದ ಸಾಮಾಜಿಕ ಕಾರ್ಯಕರ್ತ ದೇವೆಂದ್ರ ನಾಯ್ಕ ಮಾತನಾಡಿ, ಈ ಹುಳಗಳ ವಾಸನೆಯಿಂದ ವಾಕರಿಕೆ ಬರುತ್ತಿದೆ. ಈ ಹುಳಗಳಿಂದ ಶಾಲೆ ಮಕ್ಕಳಿಗೆ ಊರಿನ ಜನರಿಗೆ ಊಟಮಾಡಲು ಸಾದ್ಯವಾಗುತ್ತಿಲ್ಲಾ ಇದರಿಂದ ಬಹಳ ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಯಾವದೇ ಅಧಿಕಾರಿ ಸ್ಥಳಕ್ಕೆ ಬೇಟಿ ನೀಡಿಲ್ಲಾ. ಇನ್ನಾದರು ತಕ್ಷಣವೇ ಅಧಿಕಾರಿಗಳು ಬೇಟಿ ನೀಡಿ ಈ ವಾಸನೆ ಹುಳಗಳನ್ನು ತೆರವುಗೋಳಿಸಬೇಕೆಂದು ಆಗ್ರಹಿಸಿದರು.

loading...