ಚಂದ್ರ ಗ್ರಹಣ ಒಂದು ನೈಸರ್ಗಿಕ ಕ್ರಿಯೆಯಾಗಿದೆ:ಮೌಡ್ಯದಿಂದ ಹೋರಬರಬೇಕಿದೆ: ಜಾರಕಿಹೊಳಿ ವಿಷಾದ

0
28
loading...

ಚಂದ್ರ ಗ್ರಹಣ ಒಂದು ನೈಸರ್ಗಿಕ ಕ್ರಿಯೆ:ಮೌಡ್ಯದಿಂದ ಹೋರಬರಬೇಕಿದೆ: ಜಾರಕಿಹೊಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ :ಖಗ್ರಾಸ ಚಂದ್ರ ಗ್ರಹಣದ ನಿಯಮಿತ್ಯ ಬೆಳಗಾವಿ ನಗರದ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಜನಜಾಗೃತಿ ಕಾರ್ಯಕ್ರಮಯನ್ನು ಮಾನವ ಬಂಧುತ್ವ ವೇದಿಕೆ ಏರ್ಪಡಿಸಿತ್ತು .
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಶಾಸಕ ಹಾಗೂ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೋಳಿ ಮಾತನಾಡಿ ಗ್ರಹಣ ಒಂದು ನೈಸರ್ಗಿಕ ಸಹಜ ಕ್ರಿಯೆಯಾಗಿದೆ .ಸುಮಾರು ವರ್ಷಗಳಿಂದ ಗ್ರಂಥಗಳು,ಶಾಸ್ತ್ರಗಳು ನಮ್ಮನ್ನು ಆಳುತ್ತಿವೆ.ಮೌಡ್ಯದಿಂದ ಹೋರಬಂದು ವೈಜ್ಞಾನಿಕತೆ ಅರಿಯಬೇಕಿದೆ ,ಸುಮಾರು ೨೫೦೦ ವರ್ಷಗಳಿಂದ ನಮ್ಮನು ಮಾನಸಿಕವಾಗಿ ಬೇಡಿ ಹಾಕಿದ್ದಾರೆ,ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳೆಯದೆ.ಆದರೆ ದೇವರ ಹೇಸರಿನಲ್ಲಿ ಮೌಡ್ಯ ಬೇಳೆಸುತ್ತಿರುವುದು ಸರಿಯಲ್ಲ ಎಂದರು .

ಮಹಾನಗರ ಪಾಲಿಕೆ ಮೇಯರ್ ಬಸಪ್ಪಾ ಚಿಕ್ಕಲದಿನ್ನಿ ,ಜಿ.ಪಂ ಉಪಾದ್ಯಾಕ್ಷ ಅರುಣ ಕಟಾಂಬಳಿ ಸೇರಿದಂತೆ ಇತರರು ಇದ್ದರು .

loading...