ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಿಎಂ ದುರಹಂಕಾರದ ಮಾತು

0
10
loading...

ಬೆಂಗಳೂರು:ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣದ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ದುರಹಂಕಾರದಿಂದ ಮಾತನಾಡಿ ದ್ದಾರೆ ಎಂದು ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಕಿರಿಕಾರಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಬಾರಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ನಡೆದಿದೆ. ಆದರೆ ಯಾವುದೇ ಸೂಕ್ತ ಉತ್ತರ ಸಿಕ್ಕಿಲ್ಲ. ಇನ್ನೂ ಸಿಎಂ ಉತ್ತರ ಕರ್ನಾಟಕದ ಜನ ಮತ ಹಾಕಿಲ್ಲ. ಪ್ರತ್ಯೇಕ ರಾಜ್ಯ ತೆಗೆದುಕೊಳ್ಳಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.
ನಾವು ಅಖಂಡ ಕರ್ನಾಟಕದ ಪರವಾಗಿದ್ದೇವೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗದೇ ಹೋದರೆ ಜನರೇ ಪ್ರತ್ಯೇಕ ರಾಜ್ಯದ ಬಗ್ಗೆ ಕೇಳುತ್ತಾರೆ. ಒಂದು ಕಾಲದಲ್ಲಿ ರಾಜಕೀಯವಾಗಿ ಸಿಎಂ ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದು ನಿಜ. ಆದರೆ ತಪ್ಪಿನ ಅರಿವಾದ ಬಳಿಕ ಅವರಿಂದ ದೂರವಾಗಿದ್ದೇನೆ ಎಂದರು.

loading...