ಚಿಕ್ಕೋಡಿಯ ಸಸ್ಯೋದ್ಯಾನ ಕಾಮಗಾರಿಗೆ ಗಣೇಶ ಹುಕ್ಕೇರಿ ಚಾಲನೆ

0
33

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 24: ಪಟ್ಟಣದ ಹಿರಿಯ ನಾಗರಿಕರು ಮತ್ತು ಯುವ ಜನಾಂಗಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಸಜ್ಜಿತ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಅಭಿವೃದ್ಧಿಗೆ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ಕೊಡಿಸುವುದಾಗಿ ಸರಕಾರದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಸ್ಯ ಉದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚಿಕ್ಕೋಡಿ ಮಕ್ಕಳಿಗಾಗಿ ಚಿಲ್ಡ್‍ರ್ನ್ ಪಾರ್ಕ, ಪಂಚವಟಿ ಪಾರ್ಕ ಸಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಚಿಕ್ಕೋಡಿ ಪಟ್ಟಣದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ಚಿಕ್ಕೋಡಿ ಟ್ರೀ ಪಾರ್ಕದಲ್ಲಿ ಪಂಚವಟಿ ಪಾರ್ಕ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪಂಚವಟಿ ಪಾರ್ಕನಲ್ಲಿ ನೆಟ್ಟಿರುವ ಗಿಡಗಳು ಸುಮಾರು 100 ಮೀಟರ್ ದೂರದವರೆಗೆ ಆಮ್ಲಜನಕ ಕೊಡಲಿದೆ ಎಂದು ಹೇಳಿದರು.
ಗಿಡಮರಗಳನ್ನು ಬೆಳೆಸುವುದರಿಂದ ಒಳ್ಳೆಯ ಪರಿಸರ ನಿರ್ಮಾಣವಾಗುತ್ತದೆ. ಉತ್ತಮ ಪರಿಸರದಿಂದ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ ಎಂದರು.
ಚಿಕ್ಕೋಡಿಯ ಸಂಪಾದನಾ ಮಹಾಸ್ವಾಮಿಗಳು,ಪುರಸಭೆ ಸದಸ್ಯರಾದ ಪ್ರಭಾಕರ ಕೋರೆ, ಶಾಮ ರೇವಡೆ, ರವಿ ಮಾಳಿ, ರವಿ ಮಿರ್ಜೆ, ರವಿ ಕೊಂಡೆಬೆಟ್ಟು, ರಾಜು ವಂಟಮುತ್ತೆ ಮತ್ತು ವಲಯ ಅರಣ್ಯಾಧಿಕಾರಿ ಮೃತ್ಯುಂಜಯ ಗಣಾಚಾರಿ ಮುಂತಾದವರು ಉಪಸ್ಥಿತರಿದ್ದರು.
..
..

loading...