ಚಿಕ್ಕೋಡಿ ಆಸ್ಪತ್ರೆಯಲ್ಲಿ ಕಮೀಷನ್ ಆಸೆಗಾಗಿ ಸ್ಕ್ಯಾನಿಂಗ್ ಮಶೀನ ಬಂದ್

0
27
ಚಿಕ್ಕೋಡಿ ಆಸ್ಪತ್ರೆ
ಚಿಕ್ಕೋಡಿ ಆಸ್ಪತ್ರೆ
loading...

ವರ್ಷಗಳೇ ಉರುಳಿದರೂ ರಿಪೇರಿಯಾಗದ ಯುಎಸ್‍ಜಿ ಮಶೀನ್
ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 19: ಸರಕಾರ ಏನೆಲ್ಲ ಯೋಜನೆ ರೂಪಿಸಿದರೂ ಆ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ ಎನ್ನುವದಕ್ಕೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ತಾಜಾ ಉದಾಹರಣೆಯಾಗಿದ್ದು, ವರ್ಷಗಳೇ ಉರುಳಿದರೂ ಆಸ್ಪತ್ರೆಯಲ್ಲಿರುವ ಯುಎಸ್‍ಜಿ ಸ್ಕ್ಯಾನಿಂಗ ಮಶೀನ್ ರಿಪೇರಿ ಮಾಡಿಸದೇ ಬಡರೋಗಿಗಳು ದುಬಾರಿ ವೆಚ್ಚ ಭರಿಸಿ ಖಾಸಗಿ ಸೆಂಟರ್‍ಗಳಲ್ಲಿ ತಪಾಸಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಹೌದು, ಸದಾ ಒಂದಿಲ್ಲೊಂದು ಸಮಸ್ಯೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರ ಬೇಜವಾಬ್ದಾರಿಯಿಂದಾಗಿ 2013ರಲ್ಲಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿದ್ದ ಯುಎಸ್‍ಜಿ ಸ್ಕ್ಯಾನಿಂಗ ಮಶೀನ್ ಸೇವೆ ಇದ್ದಕ್ಕಿದ್ದಂತೆಯೇ ಸ್ಥಗಿತಗೊಂಡಿದ್ದು, ವಿಶೇಷವಾಗಿ ಗರ್ಭಿಣಿಯರಿಗೆ ಶಿಶು ಬೆಳವಣಿಗೆ ಪರಿಶೀಲಿಸಲು ಉಪಯೋಗಿಸಲು ಆದೇಶಿಸಲಾಗಿತ್ತು. ಆದರೆ ಈ ಮಶೀನ್ ಉದ್ದೇಶಪೂರ್ವಕವಾಗಿ ರಿಪೇರಿ ಮಾಡಿಸದೇ ಇರುವ ಬಗ್ಗೆ ಆಸ್ಪತ್ರೆಯ ವೈದ್ಯರ ಬಗೆಗೆ ಅನುಮಾನ ವ್ಯಕ್ತವಾಗಲಾರಂಭಿಸಿವೆ.
ಯುಎಸ್‍ಜಿ ಮಶೀನ್ ಕಾರ್ಯನಿರ್ವಹಿಸದೇ ಇರುವ ಪರಿಣಾಮ ಆಸ್ಪತ್ರೆಗೆ ಬರುವ ಗರ್ಭಿಣಿ ಮಹಿಳೆಯರನ್ನು ಚಿಕ್ಕೋಡಿ, ನಿಪ್ಪಾಣಿ, ಗಡಹಿಂಗ್ಲಜ ಪಟ್ಟಣಗಳಲ್ಲಿರುವ ಖಾಸಗಿ ಸ್ಕ್ಯಾನಿಂಗ ಸೆಂಟರಗಳಿಗೆ ಕಳುಹಿಸಲಾಗುತ್ತಿದ್ದು, ಬಡರೋಗಿಗಳಿಂದ ದುಬಾರಿ ಹಣ ಪಡೆಯುವ ಸ್ಕ್ಯಾನಿಂಗ ಸೆಂಟರ್ ಮಾಲೀಕರು ಇಲ್ಲಿನ ವೈದ್ಯರಿಗೆ ಕಮೀಷನ್ ನೀಡುತ್ತಾರೆಂಬ ಆರೋಪಗಳು ಕೇಳಿಬಂದಿವೆ.
ಇನ್ನಾದರೂ ಇಲಾಖೆಯ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಯುಎಸ್‍ಜಿ ಸ್ಕ್ಯಾನಿಂಗ ಮಶೀನ ರಿಪೇರಿಗೆ ಕ್ರಮ ಜರುಗಿಸುವ ಮೂಲಕ ಬಡರೋಗಿಗಳಿಗೆ ಸರಕಾರದ ಸೌಲಭ್ಯ ಒದಗಿಸಿಕೊಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
..

loading...