ಚೀನಾ ವಸ್ತುಗಳ ತೆರಿಗೆ ಕಡಿತ ಮಾಡಿದ ಅಮೆರಿಕ ಸಂಸತ್ತು

0
10
loading...

ವಾಷಿಂಗ್ಟನ್: ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ತೆರಿಗೆ ತಿಕ್ಕಾಟ ತಾರಕಕ್ಕೇರಿರುವಂತೆಯೇ ತನ್ನ ಹಠಮಾರಿ ಧೋರಣೆಯನ್ನು ಸಡಿಲಗೊಳಿಸಿರುವ ಅಮೆರಿಕ ಚೀನಾ ವಸ್ತುಗಳೂ ಸೇರಿದಂತೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.
ನಿನ್ನೆ ಅಮೆರಿಕ ಸಂಸತ್ತಿನಲ್ಲಿ ನಡೆದ ಕಲಾಪದ ವೇಳೆ ವಿದೇಶಿ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವ ಮಸೂದೆಗೆ ಅವಿರೋಧವಾಗಿ ಅನುಮೋದನೆ ನೀಡಲಾಯಿತು. ಈ ಹೊಸ ಮಸೂದೆಯ ಅನ್ವಯ ಟೋಸ್ಟರ್, ಕೆಮಿಕಲ್ಸ್ ಗಳೊಂದಿಗೆ ಚೀನಾ ವಸ್ತುಗಳೂ ಸೇರಿದಂತೆ ಸುಮಾರು ೧,೬೬೦ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಮುಖ ಅಂಶವೆಂದರೆ ಈ ವಸ್ತುಗಳ ಮೇಲಿನ ತೆರಿಗೆ ಕಡಿತ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಸತ್ತಿನಲ್ಲಿ ಯಾವುದೇ ರೀತಿಯ ರ‍್ಚೆ ಇಲ್ಲದೇ ಅವಿರೋಧವಾಗಿ ನರ‍್ಣಯ ಕೈಗೊಳ್ಳಲಾಗಿದೆ.
ಇನ್ನು ಪ್ರಸ್ತುತ ತೆರಿಗೆ ಕಡಿತವಾಗಿರುವ ೧,೬೬೦ ವಸ್ತುಗಳ ಪೈಕಿ ಸುಮಾರು ಶೇ.೫೦ಕ್ಕೂ ಅಧಿಕ ವಸ್ತುಗಳು ಚೀನಾ ದೇಶದ ವಸ್ತುಗಳಾಗಿವೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ವಸ್ತುಗಳ ಮೇಲೆ ಚೀನಾ ದೇಶ ಹೆಚ್ಚುವರಿ ಅಥವಾ ದುಬಾರಿ ತೆರಿಗೆ ಹೇರಿರುವುದನ್ನು ಖಂಡಿಸಿದ್ದರು. ಅಲ್ಲದೆ ಇದಕ್ಕೆ ತಿರುಗೇಟು ಎಂಬಂತೆ ತಮ್ಮ ರ‍್ಕಾರದಿಂದಲೂ ಚೀನಾ ಸೇರಿದಂತೆ ವಿವಿಧ ದೇಶಗಳ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರು.
ತಾರಕಕ್ಕೇರಿದ ಚೀನಾ-ಅಮೆರಿಕ ವಾಣಿಜ್ಯ ತಿಕ್ಕಾಟ ಹಿನ್ನಲೆಯಲ್ಲಿ ಸಂಧಾನದ ಕ್ರಮ ಎಂದು ತಜ್ಞರ ಬಣ್ಣನೆ
ಇನ್ನು ಅಮೆರಿಕ ಸಂಸತ್ತಿನ ನಡೆಯನ್ನು ಸಂಧಾನದ ಕ್ರಮ ಎಂದು ಅಮೆರಿಕ ರಾಜಕೀಯ ತಜ್ಞರು ಬಣ್ಣಿಸಿದ್ದು, ಮೊದಲ ಹೆಜ್ಜೆಯಾಗಿ ಅಮೆರಿಕ ತನ್ನ ತೆರಿಗೆಯನ್ನು ಕಡಿತಗೊಳಿಸಿದೆ. ಈಗ ಇತರೆ ದೇಶಗಳೂ ಕೂಡ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.

loading...