ಚೊಳಚಗುಡ್ಡದ ವೀರಯೋಧನಿಗೆ ನಮನ

0
11
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಕಾರ್ಗಿಲ್‌ ವಿಜಯ ದಿನವಾದ ಗುರುವಾರದಂದು ಕಾರ್ಗಿಲ್‌ ಯುದ್ದದಲ್ಲಿ ಹೋರಾಡಿ ಪ್ರಾಣಕಳೆದುಕೊಂಡ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ವೀರಯೋಧ ಶಿವಬಸಯ್ಯ ಕುಲಕರ್ಣಿ ಅವರ ವೀರಗಲ್ಲಿಗೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಕಾರ್ಗಿಲ್‌ ಯುದ್ದ ನಾವಾರು ಉಹಿಸಿಕೊಂಡಿರದ ಯುದ್ದವಾಗಿತ್ತು. ಭಾರತ ಎಂದಿಗೂ ಯುದ್ದವನ್ನು ಬಯಸದ ರಾಷ್ಟ್ರವಾಗಿದ್ದು, ವಿಶ್ವಕ್ಕೆ ಶಾಂತಿ ಸಾರಿದ ರಾಷ್ಟ್ರವಾಗಿದೆ. ಆದರೆ ಪರಿಸ್ಥಿತಿ ಕೈಮೀರಿ ವೈರಿಪಡೆ ಆಕ್ರಮಿಸಿದಾಗ ಅನಿವಾರ್ಯವಾಗಿ ದೇಶ ರಕ್ಷಣೆಗಾಗಿ ಸಿದ್ದರಾಗಬೇಕಾಗಿತ್ತು ಎಂದರು. ಆದರೆ ಪಾಕಿಸ್ಥಾನ ತಾನು ತಿಳಿದಿದಂತೆ ಭಾರತ ಪ್ರತಿರೋಧಿಸಲಾರದು ಎಂಬ ಮಾತಿಗೆ ನಮ್ಮ ಭಾರತೀಯ ಸೈನಿಕರು ದಿಟ್ಟ ಉತ್ತರ ನೀಡಿ ಪಾಕಿಸ್ತಾನಿಯರನ್ನು ಬಗ್ಗು ಬಡಿದರು. ಅಂತಹ ಮರೆಯಲಾಗದ ಕಾರ್ಗಿಲ್‌ ಯುದ್ದದಲ್ಲಿ ನಮ್ಮ ರಾಜ್ಯದ ನಮ್ಮ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಶಿವಬಸಯ್ಯ ಕುಲಕರ್ಣಿ ತೋರಿದ ಪರಾಕ್ರಮ ಅಪ್ರತಿಮವಾಗಿದ್ದು, ಇದರ ಜೊತೆಗೆ ಕಾರ್ಗಿಲ್‌ ಯುದ್ದದಲ್ಲಿ ಹೋರಾಟ ಮಾಡಿ ವೀರ ಮರಣಹೊಂದಿದ ಪ್ರಥಮ ಕನ್ನಡಿಗನಾಗಿದ್ದಾನೆ ಎಂದರು. ಸರಕಾರ ಆ ಕುಟುಂಬಕ್ಕೆ ಎಷ್ಟೇ ಸಹಾಯ ಸಹಕಾರ ನೀಡಿದ್ದರೂ ಕುಲಕರ್ಣಿಯವರ ದೇಶ ಸೇವೆಗೆ ಬೆಲೆ ಕಟ್ಟಲಾಗದು. ಯುವಕರಿಗೆ ಸ್ಪೂರ್ತಿಯಾಗಿದ್ದ ಕುಲಕರ್ಣಿ ಅವರನ್ನು ಜಿಲ್ಲೆಯ ಯುವಕರು ಕಾರ್ಗಿಲ್‌ ವಿಜಯೋತ್ಸವದ ದಿನವಾದ ಇಂದು ಒಂದಿನವಾದರು ಅವರ ಸ್ಮರಣೆ ಮಾಡುವದರ ಜೊತೆಗೆ ಅವರಂತೆ ದೇಶ ಸೇವೆಗೆ ಮುಂದಾಗಬೇಕು ಎಂದರು.

loading...