ಛತ್ತೀಸ್‍ಘಢ: ಎನ್‍ಕೌಂಟರ್‍ಗೆ 7 ಬಲಿ

0
6
loading...

ರಾಯ್ಪುರ: ಛತ್ತೀಸ್‍ಘಢದ ಬಿಜಾಪುರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದ ಭದ್ರತಾಪಡೆಗಳ ಜೊತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಮೂವರು ಮಹಿಳೆಯರೂ ಸೇರಿದಂತೆ 7 ಜನ ನಕ್ಸಲರು ಬಲಿಯಾಗಿದ್ದಾರೆ. ಮೃತ ನಕ್ಸಲರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಭಾರತೀಯ ಯೋಧರು ವಶಪಡಿಸಿಕೊಂಡಿದ್ದಾರೆ.
ಮೃತಪಟ್ಟ 7 ಜನರಲ್ಲಿ ಮೂವರು ಮಹಿಳೆಯರೂ ಇದ್ದಾರೆ ಎಂದು ರಾಜ್ಯ ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಿ. ಸುಂದರ್ರಾಜ್ ತಿಳಿಸಿದ್ದಾರೆ. ನಕ್ಸಲರು ಯೋಧರತ್ತ ಗುಂಡು ಹಾರಿಸಿದಾಗ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಮೊರೆತ ನಿಂತ ನಂತರ ಸ್ಥಳವನ್ನು ಪರಿಶೀಲಿಸಿದಾಗ ಮೂವರು ಮಹಿಳೆಯರೂ ಸೇರಿದಂತೆ ಏಳು ನಕ್ಸಲರು ಹತರಾಗಿದ್ದು ತಿಳಿದುಬಂದಿದೆ.

loading...