ಜನರ ನೆಮ್ಮದಿ ಕಸಿದುಕೊಂಡ ನೆಮ್ಮದಿ ಕೇಂದ್ರ

0
10
loading...

ಕನ್ನಡಮ್ಮ ಸುದ್ದಿ
ಮುಗಳಖೋಡ 25: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಅಟಲ್‍ಜೀ ಸೇವಾ ಕೇಂದ್ರದಲ್ಲಿ ಪ್ರಾರಂಭವಾಗಿ ಸುಮಾರು 4 ರಿಂದ 5 ವರ್ಷ ಕಳೆದರೂ ಇಲ್ಲಿ ಬಂದಂತಹ ಜನರಿಗೆ ನೆರಳಿಲ್ಲಾ ಮಳೆಗಾಲದಲ್ಲಿ ಸಹ ಸರತಿ ಸಾಲಿನಲ್ಲಿ ನಿಂತು ಪಹಣಿಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ತಗೆದುಕೊಳ್ಳಲು ಪರಿದಾಡಬೇಕಾಗಿದೆ
ಮುಗಳಖೋಡ, ಪಾಲಬಾವಿ, ಸುಲ್ತಾನಪೂರ, ಹಂದಿಗುಂದ, ಕಪ್ಪಲಗುದ್ದಿ, ಮರಾಕೋಡಿ, ಖನದಾಳ, ಇಟ್ನಾಳ ಇನ್ನೀತರ ಸುತ್ತಮುತ್ತಲಿನ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕೆ ಈ ಸರತಿ ಸಾಲಿನಲ್ಲಿ ನಿಂತು ಮಳೆ ಹಾಗೂ ಬಿಸಿಲಿನಲ್ಲಿ ನಿಂತು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ಶಪಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಇಲ್ಲಿಯ ಪುರಸಭೆ ಅಧ್ಯಕ್ಷರು, ಸದಸ್ಯರು ಇದನ್ನು ನೋಡಿ ನೋಡದವರಂತೆ ವರ್ತಿಸುತಿದ್ದಾರೆ. ಆದರೆ ಮುಖ್ಯಾಧಿಕಾರಿಯ ತಮ್ಮ ವಾಹನ ನಿಲುಗಡೆಗೆ ನೆರಳನ್ನು ಮಾಡಿಕೊಂಡಿದ್ದಾರೆ. ಆದರೆ ಜನರಿಗೆ ಯಾವುದೇ ತರಹದ ವ್ಯವಸ್ಥೆಯು ಇರುವುದಿಲ್ಲ. ಇದರಿಂದ ಜನರಿಗೆ ಮುಕ್ತಿಬೇಕಾಗಿದೆ.
ಬಾಕ್ಸ್ ಲೈನ್:
ಈ ಕಾಮಗಾರಿಗೆ ಪುರಸಭೆ ವತಿಯಿಂದ ಮೂರು ಲಕ್ಷ ರೂಪಾಯಿ ತಗೆದಿಟ್ಟು ಟೆಂಡರ್ ಕರೆದು ಕೆಲಸವನ್ನು ಪ್ರಾರಂಭಿಸಿ ಮೂರು ತಿಂಗಳೊಳಗಾಗಿ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ.
ಮಹಾಂತೇಶ ಗೋಳಸಂಗಿ
ಅಧ್ಯಕ್ಷರು ಪುರಸಭೆ ಮುಗಳಖೋಡ

loading...