ಜನರ ವಿಶ್ವಾಸವಿಲ್ಲದ ಈ ಸರ್ಕಾರಕ್ಕೆ ಆಯಸ್ಸು ಇಲ್ಲ

0
15
loading...

ಬೆಂಗಳೂರು:ಜನರ ವಿಶ್ವಾಸವಿಲ್ಲದ ಈ ಸರ್ಕಾರಕ್ಕೆ ಆಯಸ್ಸು ಇಲ್ಲ. ಈ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ರೈತರ ಸಾಲ ಸಂಪÇರ್ಣ ಮನ್ನಾ ಮಾಡದಿದ್ದರೆ ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡ ಸರ್ಕಾರದ ಮರ್ಯಾದೆ ಹರಾಜು ಹಾಕುತ್ತೆÃವೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು,ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.೨೮ರಿಂದ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕೆಲಸಗಳು ಪÅನಾರಂಭ ಆಗಿಲ್ಲ.ಕಳೆದ ಮೂರುವರೆ ತಿಂಗಳಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸ್ತಬ್ದಗೊಂಡಿದೆ.ಅಧಿವೇಶನ ಅಂತ್ಯಗೊಳ್ಳುವ ಜು.೧೨ರ ಬಳಿಕ ಪ್ರತಿಪಕ್ಷದ ಎಲ್ಲ ೧೦೪ಶಾಸಕರು ಜನರ ಮುಂದೆ ಹೋಗಿ ಸರ್ಕಾರದ ಮಾನ ಹರಾಜು ಹಾಕುತ್ತೆÃವೆ ಎಂದು ವಾಗ್ದಾಳಿ ನಡೆಸಿದರು.
೩೭ ಶಾಸಕರ ಬಲವಿರುವ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿರುವುದು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆ ಯಾಗಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣ ನೀಡಿ ಕಾಂಗ್ರೆಸ್‌ನವರು ಜೆಡಿಎಸ್ ವರಿಷ್ಠರ ಕಾಲಿಗೆ ಬಿದ್ದು ಸರ್ಕಾರ ಮಾಡಿದ್ದು ದುರಂತ ಎಂದರು.
ಇದೇ ವೇಳೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ,ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಮಾಡಲೇಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.
ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರೆಯುತ್ತದೆ. ಬಳಿಕ ಸಿಎಂ ಏನು ಉತ್ತರ ನೀಡಲಿದ್ದಾರೆ ಎಂದು ನೋಡುತ್ತೆÃವೆ.ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಮಾಡಲೇಬೇಕು, ಇಲ್ಲವಾದಲ್ಲಿ ಬಿಜೆಪಿ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡಲಿದೆ. ಶಾಸಕರ ನಿಧಿ ವಾಪಸ್‌ಗೆ ಬೆಂಬಲವಿದೆ. ಖರ್ಚಾಗದೇ ಉಳಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳೊÃದಾದರೆ ಅದು ಸರಿ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಸಾಲಮನ್ನಾ ಮಾಡಲೇಬೇಕಾದ ಅನಿವಾರ್ಯತೆಯನ್ನ ಮೈತ್ರಿ ಸರ್ಕಾರವೇ ಸೃಷ್ಟಿಸಿಕೊಂಡಿದೆ. ಈ ನಿರೀಕ್ಷೆ ಹುಸಿಯಾಗದೇ ಇರಲಿ. ರಾಜ್ಯಪಾಲರ ಭಾಷಣದಲ್ಲಿ ರೈತರ ಸಾಲಮನ್ನಾ ವಿಚಾರವನ್ನು ಪ್ರಸ್ತಾಪಿಸಬೇಕಿತ್ತು ಎಂದರು

loading...