ಜನ ಸಾಮಾನ್ಯರಿಗಾಗಿ ಶುದ್ಧಗಂಗಾ ಘಟಕಗಳ ನಿರ್ಮಾಣ: ಶಿವಾನಂದ

0
6
loading...

ಕನ್ನಡಮ್ಮ ಸುದ್ದಿ- ರಾಣೇಬೆನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಿವಿಧ ಹಳ್ಳಿಗಳಲ್ಲಿ ಜನ ಸಾಮನ್ಯರಿಗೆ ಶುದ್ಧವಾದ ಕುಡಿಯುವ ನೀರು ದೊರೆಯಬೇಕೆಂದು ಶುದ್ಧಗಂಗಾ ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದು ರೂ.2/ ಕ್ಕೆ 20 ಲೀಟರ್ ಸೌಲಭ್ಯವನ್ನು ಡಾ|| ವೀರೇಂದ್ರ ಹೆಗ್ಡೆಯವರು ನಮ್ಮಲೇರಿಗೂ ನೀಡಿರುತ್ತಾರೆ. ಈ ಸೌಲಭ್ಯದ ಬಳಕೆಯನ್ನು ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ನೀರಿನಿಂದ ಬರುವಂತೆಹ ಕಾಯಿಲೆಗಳಿಂದ ಮುಕ್ತವಾಗಬೇಕೆಂದು ಎಂದು ಕಮದೋಡ ಎಸ್.ಡಿ.ಎಮ್.ಸಿ ಅಧ್ಯಕ್ಷ ಶಿವಾನಂದ ಹೇಳಿದರು.

ತಾಲೂಕಿನ ಕಮದೋಡ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆದ ಶುದ್ಧ ಗಂಗಾ ಕುಡಿಯುವ ನೀರಿನ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು. ಎಲ್ಲರ ಮನೆಗಳಲ್ಲಿಯು ನೀರನ್ನು ಶುದ್ಧಿಕರಿಸುವ ಯಂತ್ರಗಳನ್ನು ಅಳವಡಿಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇವಲ ರೂ.2/ ಕ್ಕೆ ಶುದ್ಧವಾದ ನೀರು ದೂರೆಯಬೇಕೆಂದು ಈ ಅನುಕೂಲವನ್ನು ನೀಡಿದ್ದು. ಇದಕ್ಕೆ ನಾವೆಲ್ಲರೂ ಸಹಕಾರ ನೀಡಿ ಈ ಯೋಜನೆಯನ್ನು ಯಶಸ್ವಿಸಿಗೊಳಿಸ ಬೇಕೆಂದರು. ಪ್ರಾಸ್ತಾವಿಕವಾಗಿ ಯೋಜನಾಧಿಕಾರಿಗಳಾದ ಈಶ್ವರ್.ಎಮ್.ಎಸ್ ಮಾತನಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಮಿತಿ ಸದಸ್ಯ ಎಮ್.ಎಮ್.ವಿಭೂತಿ, ಸ್ವ ಸಹಾಯ ಸಂಘದ ಸದಸ್ಯರು ಶುದ್ಧಗಂಗಾ ಮೇಲ್ವಿಚಾರಕರಾದ ವಿರೇಶ.ಟಿ.ಎ, ಮೇಲ್ವಿಚಾರಕರಾದ ರೇಣುಕಾಬಾಯಿ, ಸೇವಾಪ್ರತಿ ನಿಧಿಯಾದ ನೂರಹ್ಮದ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

loading...