ಜಯಮಾಲ ಬದಲಾವಣೆಗೆ ಎಂಎಲ್‌ಸಿಗಳ ಬಿಗಿಪಟ್ಟು ಸಭಾಪತಿ ಸ್ಥಾನ ಬಿಟ್ಟುಕೊಡಲ್ಲ

0
15
loading...

ಬೆಂಗಳೂರು:ವಿಧಾನ ಪರಿಷತ್ ಸಭಾನಾಯಕಿ ಜಯಮಾಲಾ ಅವರನ್ನು ಆಯ್ಕೆ ಮಾಡಲಾಗಿದೆ.ಆದರೆ ಕೈ ಹಿರಿಯ ನಾಯಕರು ಜಯಮಾಲ ಆಯ್ಕೆ ವಿರೋಧಿಸಿ ಚಳುವಳಿ ಆರಂಭಿಸಿದ್ದಾರೆ.
ವಿಧಾನಪರಿಷತ್‌ನ ಸರಿ ಸುಮಾರು ೨೦ಸದಸ್ಯರು ಎಐಸಿಸಿ ಅಧ್ಯಕ್ಷ ರಾಹುಲ್‌ಗೆ ಪತ್ರವನ್ನು ಬರೆದಿದ್ದು,ಜಯಮಾಲಾರನ್ನ ಸಭಾ ನಾಯಕಿ ಸ್ಥಾನದಿಂದ ಬದಲಾಯಿಸಿ ಹಿರಿಯರಿಗೆ ಆಸ್ಥಾನವನ್ನ ನೀಡುವಂತೆ ಉಲ್ಲೆÃಖ ಮಾಡಿದ್ದಾರೆ ಎನ್ನಲಾಗಿದ್ದು, ಜಯ ಮಾಲಾ ಬದಲಾವಣೆಗೆ ಕಾಂಗ್ರೆಸ್‌ನ ಎಂಎಲ್‌ಸಿಗಳು ಬಿಗಿಪಟ್ಟು ಹಿಡಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೇ ಮೇಲ್ಮನೆಯಲ್ಲಿ ನಮಗೆ ಬಹುಮತವಿದೆ,ಜೆಡಿಎಸ್ ೧೩ಸದಸ್ಯರಿದ್ದು ಅವರಿಗೆ ಯಾಕೆ ಬಿಟ್ಟುಕೊಡಬೇಕು ಎಂದು ಕೂಡ ಅತೃಪ್ತರ ಗುಂಪಿನಲ್ಲಿ ಚರ್ಚೆ ನಡೆದಿದ್ದು, ಸಂಪÅಟದಲ್ಲಿ ನಾಲ್ವರು ಎಂಎಲ್‌ಸಿಗಳಿಗೆ ಸ್ಥಾನ ನೀಡಿ ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಉಲ್ಲೆÃಖ ಮಾಡಲಾಗಿದೆ.
ತಮ್ಮ ವಿರುದ್ದ ಸ್ವಪಕ್ಷದ ನಾಯಕರು ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿರುವ ಸಚಿವೆ ಜಯಮಾಲ ನೊಂದುಕೊಂಡಿದ್ದು, ಮಹಿಳೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದು ತಾರತಮ್ಯ ಮಾಡುತ್ತಿದ್ದಾರೆ ಅಂತ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಈ ನಡುವೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಬಾರಿ ವಿರೋಧ ವ್ಯಕ್ತವಾಗುತ್ತಿದ್ದು,ಸಭಾಪತಿ ಸ್ಥಾನವನ್ನ ಜೆಡಿಎಸ್‌ಗೆ ಬಿಡುವುದು ಬೇಡ,ಮೇಲ್ಮನೆಯಲ್ಲಿ ನಮಗೆ ಬಹುಮತವಿದೆ ಜೆಡಿಎಸ್೧೩ಸದಸ್ಯರಿದ್ದು ಅವರಿಗೆ ಯಾಕೆ ಬಿಟ್ಟುಕೊಡ ಬೇಕು ಅನ್ನೊಂದು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ.
ಇದಲ್ಲದೇ ಬಾಗಲಕೋಟೆ ಜಿಲ್ಲೆ ಬಾದಾಮಿ ವಿಧಾನಸಭಾ ಕ್ಷೆÃತ್ರದಿಂದ ಸ್ಪರ್ಧೆ ಮಾಡಿ ಗೆದ್ದಿರುವ ಸಿದ್ದರಾಮಯ್ಯ ಕೂಡ ಜೆಡಿ ಎಸ್‌ಗೆ ವಿಧಾನಸಪರಿಷತ್ ಸದ್ಯಸ ಸ್ಥಾನಕ್ಕೆ ಬಾದಾಮಿ ವಿಧಾನಸಭಾ ಚುನಾವಣೆಯಲ್ಲಿ ತಾವು ಗೆಲ್ಲುವುದಕ್ಕೆ ಸಹಾಯ ಮಾಡಿದ್ದ ಎಸ್.ಆರ್ ಪಾಟೀಲ್ ಗೆ ನೀಡುವ ಬಗ್ಗೆ ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ.
ಇವೆಲ್ಲದರ ನಡುವೆ ಕಾಂಗ್ರೆಸ್ ವಿಧಾನ ಪರಿಷತ್‌ಗೆ ಸಭಾಪತಿ ಸ್ಥಾನಕ್ಕೆ ಸಂಬಂಧಪಟ್ಟಂತೆ ನಡೆದುಕೊಳ್ಳುವ ರೀತಿ ಕೂಡ ಜೆಡಿಎಸ್ ನಾಯಕರಿಗೆ ಬೇಸರ ಮಾಡಿಕೊಂಡಿದ್ದಾರೆ.
ಇದಲ್ಲದೇ ಸಭಾಪತಿ ಸ್ಥಾನಕ್ಕೆ ಸಂಬಂಧಪಟ್ಟಂತೆ ಜೊತೆ ಮಾತನಾಡಿದ್ದ ಡ್ಯಾನಿಶ್‌ಗೆ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನವನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಿಲ್ಲ.ನೀವು ಬೇಕಾದ್ರೆ ಬಸವರಾಜ ಹೊರಟ್ಟಿಗೆ ಸಚಿವ ಸ್ಥಾನವನ್ನು ನೀಡಿ ನಮ್ಮ ಅಭ್ಯಂತರವಿಲ್ಲ ಅಂತ ಹೇಳಿದ್ದಾರೆ.

loading...