ಜಯಾಮಾಲ ಸಭಾ ನಾಯಕಿ; ಕಾಂಗ್ರೆಸ್ ಶಾಸಕರ ಅಸಮಾಧಾನ

0
12
loading...

ಬೆಂಗಳೂರು:ವಿಧಾನಪರಿಷತ್ ಕಲಾಪ ಆರಂಭವಾಗಿದ್ದು, ಸಭಾ ನಾಯಕಿಯಾಗಿ ಜಯಾಮಾಲ ನೇಮಕಕ್ಕೆ ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಷತ್ ಕಲಾಪಕ್ಕೆ ಶಾಸಕ ವಿ.ಎಸ್.ಉಗ್ರಪ್ಪ, ಹೆಚ್.ಎಂ.ರೇವಣ್ಣ ಗೈರಾಗಿದ್ದು,ಜಯಮಾಲಾ ನೇಕವನ್ನು ವಿರೋಧಿಸಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ದೂರು ನೀಡಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಮೊದಲಿಗೆ ಹೊಸ ಸದಸ್ಯರು ಪರಿಚಯ ಮಾಡಿಕೊಂಡರು.ಆದರೆ ಹೊಸ ಸದಸ್ಯರೇ ಬಹುತೇಕ ಬಂದಿ ಗೈರಾಗಿದ್ದಾರೆ. ಹೀಗಾಗಿ ಕೆಲವರಷ್ಟೆÃ ತಮ್ಮ ಪರಿಚಯ ಮಾಡಿಕೊಂಡರು.

ಸಭಾನಾಯಕಿ ಜಯಮಾಲಾ, ಸಚಿವ ಸಿ.ಎಸ್. ಪÅಟ್ಟರಾಜು, ಪÅಟ್ಟರಂಗಶೆಟ್ಟಿ, ಯು.ಟಿ. ಖಾದರ್, ಶಿವಶಂಕರ್ ರೆಡ್ಡಿ, ಐವಾನ್ ಡಿಸೋಜಾ, ಎಸ್.ಆರ್. ಪಾಟೀಲ್, ವೀಣಾ ಅಚ್ಚಯ್ಯ ಸೇರಿ ೬ ಕಾಂಗ್ರೆಸ್ ಸದಸ್ಯರು ಮಾತ್ರ ಹಾಜರಿದ್ದರು.

loading...