ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ

0
34
loading...

ಜಾಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಆಗ್ರಹ

ಕನ್ನಡಮ್ಮ ಸುದ್ದಿ- ಬೆಳಗಾವಿ: ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಹಾನಗರ ಪಾಲಿಕೆ ಎದುರು ಬುಧವಾರದಂದು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ‌ ಜಾಹೀರಾತು ಫಲಕಗಳು, ಹೋರ್ಡಿಂಗ್,ಅಂಗಡಿ ಮುಗಟ್ಟುಗಳ, ಶಾಲಾ ಕಾಲೇಜ್ ನಾಮಫಲಕ, ರಾಜಕಾರಣಿಯ ಶುಭಾಶಯ ಕಟೌಟಗಳಲ್ಲಿ ಕನ್ನಡವನ್ನು ಬಳಸದೆ ಸರ್ಕಾರವನ್ನು ಸ್ಪಷ್ಟವಾಗಿ ಉಲ್ಲಘಂನೆ ಮಾಡುತ್ತಿದೆ. ಸರ್ಕಾರದ ಆದೇಶ ಪಾಲಿಸಬೇಕಾದ ಪಾಲಿಕೆ ಅಧಿಕಾರಿಗಳಿ ಆದೇಶ ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಎಲ್ಲದರಲ್ಲಿ‌ ಶೇ.೭೫ರಷ್ಟು ಕನ್ನಡವನ್ನು ಬಳಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇನ್ನೂ ಹದಿನೈದು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ.ಕನ್ನಡವಿರದ ಜಾಹೀರಾತು ಗಳನ್ನು ಕಿತ್ತು ಹಾಗೂ ಮಸಿ ಬಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ‌ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ಗವನ್ನವರ,
ದೀಪಕ ಗುಡಗನಟ್ಟಿ, ದೇವೆಂದ್ರ ತಳವಾರ, ಗಜಾನನ ಶಿಂಗೆ ಸೇರಿದಂತೆ ಕರವೇ ಸದಸ್ಯರು ಹಾಜರಿದ್ದರು.

loading...