ಜಿಲ್ಲಾಧಿಕಾರಿ ಕರ್ತವ್ಯ ಅರಿತು ಸಮರ್ಪಕ ಕಾರ್ಯನಿರ್ವಹಿಸಲಿ: ಪಾಟೀಲ

0
11
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಸುಳ್ಳು ಹೇಳುವ ಕೆಲ ರಾಜಕಾರಣಿಗಳಿಂಗಿಂತ ಒಂದು ಹೆಜ್ಜೆ ಮುಂದೆ ಇರುವ ಜಿಲ್ಲಾಧಿಕಾರಿಗಳು ಬರಿ ಪೆಪರ್‌ ಟೈಗರ್‌ ಆದರೆ ಸಾಲದು, ಮೊದಲು ತಮ್ಮ ಕರ್ತವ್ಯವನ್ನು ಅರಿತು ಜಿಲ್ಲಾಡಳಿತದ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತ ಮಾಡಬೇಕೆ ಹೊರತು, ತಾವೇ ಜಿಲ್ಲಾ ಉಸ್ತುವಾರಿ ಸಚಿವರಂತೆ ವರ್ತಿಸುತ್ತಿರುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಬಿ.ಸಿ.ಪಾಟೀಲ ಕಟುವಾಗಿ ಎಚ್ಚರಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಟ್ಟೀಹಳ್ಳಿ ತಾಲೂಕು ರಚನೆಯಾಗಿ 5 ತಿಂಗಳು ಕಳೆದಿವೆ. ಬಿ.ಎಸ್‌.ಎನ್‌.ಎಲ್‌ ಸಂಪರ್ಕ ಕೊಡಿಸಲು ಆಗಿಲ್ಲ ಹಾಗೂ ಕರ್ನಾಟಕ ಸ್ಟೇಟ್‌ ವೈಡ್‌ ನೆಟ್‌ ವರ್ಕ ಪ್ರಾರಂಭವಾಗಿಲ್ಲ ಇದರಿಂದ ತಾಲೂಕು ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುವ 17 ಕ್ಕೂ ಹೆಚ್ಚು ಇಲಾಖೆಗಳು ಕಾರ್ಯಗತವಾಗಿಲ್ಲ. ಬರಿ ಪತ್ರಿಕಾಗೋಷ್ಟಿ ಮಾಡಿ ಪತ್ರಿಕೆಯಲ್ಲಿ ಪ್ರಚಾರ ತಗೆದುಕೊಂಡರೆ ಸಾಲದು, ತಾಲೂಕಿನಲ್ಲಿ ಶಾಸಕರು ಇದ್ದಾರೆ ಎಂಬುದು ಅವರಿಗೆ ತಿಳಿಯದಾಗಿದೆ. ತುಂಗಾ ಮೆಲ್ದಂಡೆ ಯೊಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಇದುವರೆಗೂ ಪರಿಹಾರ ಒದಗಿಸಿಲ್ಲ. ಈ ಬಗ್ಗೆ ಅವರಿಗೆ ನಾಲ್ಕು ಭಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಮಂತ್ರಿಯಂತೆ ವರ್ತಿಸುವರು ಅವರು ಮೊದಲು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಎಚ್ಚರಿಸಿದರು.

loading...