“ಜಿಲ್ಲಾಸ್ಪತ್ರೆಯಲ್ಲಿ ಮೂಗು ಮುಚ್ಚಿಕೊಳ್ಳುವ ವಾತಾವರಣ” ರಸ್ತೆ ಮೇಲೆ ಹರಿಯುತ್ತಿರುವ ಡ್ರೈನೇಜ್ ನೀರು:ಕುರುಡಾದ ಅಧಿಕಾರಿಗಳು

0
17
loading...

“ಜಿಲ್ಲಾಸ್ಪತ್ರೆಯಲ್ಲಿ ಮೂಗು ಮುಚ್ಚಿಕೊಳ್ಳುವ ವಾತಾವರಣ”

ರಸ್ತೆ ಮೇಲೆ ಹರಿಯುತ್ತಿರುವ ಡ್ರೈನೇಜ್ ನೀರು:ಕುರುಡಾದ ಅಧಿಕಾರಿಗಳು

ಆನಂದ ಭಮ್ಮಣ್ಣವರ

ಬೆಳಗಾವಿ:ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುವುದು ಕಾಯಿಲೆ ಕಡಿಮೆ ಮಾಡಿಕೊಳ್ಳಲು.ಆದರೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾಯಿಲೆ ಕಡಿಮೆ ಮಾಡಿಕೊಳ್ಳಲು ಹೋದರೆ ಅಲ್ಲಿನ ವಾತಾವಾರಣದಿಂದ ಕಾಯಿಲೆ ತಂದುಕೊಳ್ಳಲು ಹೋದಂತೆ ಎಂಬ ಮಾತು ಕೇಳಿ ಬರುತ್ತಿದೆ.ಇದಕ್ಕೆ ಕಾರಣ ಜಿಲ್ಲಾಸ್ಪತ್ರೆಯ ಆವರಣದಲ್ಲಿನ ಕೊಳಕು ವಾತಾವರಣ.

ಆಸ್ಪತ್ರೆಯ ವಾತಾವರಣ ಸ್ವಚ್ಛತೆಯಿಂದ ಕೂಡಿರಬೇಕು ಎಂಬ ಮಾತನ್ನು ಮರೆತಿರುವ ಇಲ್ಲಿನ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.ಆಸ್ಪತ್ರೆಯ ಆವರಣದಲ್ಲಿ ಕಳೆದ ಒಂದು ತಿಂಗಳಿನಿಂದ ಒಳ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ.ಆದರೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಮೌನವಾಗಿರುವುದು ಸಾರ್ವಜನಿಕರ ಆಕ್ರೊÃಶಕ್ಕೆ ಕಾರಣವಾಗಿದೆ.

ಜಿಲಾಸ್ಪತ್ರೆಯ ತುರ್ತು ವಿಭಾಗದ ಮುಖ್ಯ ರಸ್ತೆಯ ಮೇಲೆ ಈ ಒಳಚರಂಡಿ ನೀರು ಹರಿಯುತ್ತಿದೆ.ಇಲ್ಲಿನ ಸ್ಥಳೀಯರು ಈ ಗಲೀಜು ನೀರಿನ ವಾಸನೆಯಿಂದ ಆಸ್ಪತ್ರೆಯ ಮುಂದೆ ನಿಂತುಕೊಳ್ಳಲು ಆಗದೆ ಪರದಾಡುವಂತಾಗಿದೆ.

ಕಳೆದ ಹಲವು ದಿನಗಳ ಹಿಂದೆ ಈ ಡ್ರೆöÊನೇಜ್ ನೀರು ರಸ್ತೆ ಮೇಲೆ ಹರಿಯುತ್ತಿರುವದನ್ನು ಸ್ಥಳಿಯ ಆಟೋ ಚಾಲಕರು ವಿರೋಧಿಸಿ ಪ್ರವೇಶ ದ್ವಾರ ಬಂದ್ ಮಾಡಿ ಪ್ರತಿಭಟನೆ ಕೂಡ ನಡೆಸಿದರು.ಅಧಿಕಾರಿಗಳು ಮಾತ್ರ ಯುಜಿಡಿ ಘಟಕ ಹಳೆದಾಗಿದೆ ಸಮಸ್ಯೆಯಾಗಿದೆ ಚರಂಡಿ ಬ್ಲಾಕ್ ಆಗಿದೆ ಸರಿ ಪಡೆಸುತ್ತವೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.

ಒಳ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಪಾಲಿಕೆ ಅಧಿಕಾರಿಗಳ ಗಮನಕ್ಕೂ ಸ್ಥಳೀಯ ಶಾಸಕ ಅನಿಲ ಬೆನಕೆ ಪರಿಶೀಲಿಸಿ ಸಮಸ್ಯೆ ಪರೆಹರಿಸಲು ಸೂಚಿಸಿದ್ದಾರೆ.ಆದರೆ ಅಧಿಕಾರಿಗಳು ಮಾತ್ರ ಇದಕ್ಕೂ ತಮ್ಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾನ ಮೌನವಹಿಸಿದ್ದಾರೆ.

ಡ್ರೆöÊನೇಜ್ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಈ ಒಂದು ಸ್ಥಳದಲ್ಲಿ ಮಾತ್ರ ಹರಿಯುತ್ತಿಲ್ಲ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ರಸ್ತೆ ಪಕ್ಕ ಒಳ ಚರಂಡಿ ನೀರು ಹರಿಯುತ್ತಿದ್ದು,ದಿನಾಲೂ ವಿದ್ಯಾರ್ಥಿಗಳು ಸಾರ್ವಜನಿಕರು ಮೂಗುಮುಚ್ಚಿಕೊಂಡು ನಡೆದಾಡಬೇಕಾಗಿದೆ.

ಸ್ಮಾರ್ಟ್ಸಿಟಿಯತ್ತ ದಾಪುಗಾಲು ಇಡುತ್ತಿರುವ ಕುಂದಾ ನಗರಿ ಬೆಳಗಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದ ಸ್ವಚ್ಛತೆಗೆ ಆದ್ಯತೆ ನೀಡದೆ ಈ ತರಹದ ಕೋಳಚೆ ಪ್ರಧೇಶಗಳಾಗಿ ಭಾಸವಾಗುತ್ತಿವೆ.

ಇನ್ನಾದರೂ ನಗರದ ಸುಂದರಕ್ಕೆ ದಕ್ಕೆ ತರುವ ಒಳ ಚರಂಡಿ ನೀರು,ಕಸ ವಿಲೆವಾರಿಯಂತಹ ಸಮಸ್ಯೆಯನ್ನು ಆದಷ್ಟೂ ಬೇಗ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಿ ಎಂಬುವುದು ನಮ್ಮ ವರದಿಯ ಆಶಯವಾಗಿದೆ.

ಭಾಕ್ಸ

ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಮಾತು ಒಂದು ಕಡೆಯಾದರೆ,ಇಲ್ಲಿನ ಒಳ ಚರಂಡಿ ನೀರು ರಸ್ತೆ ಮೇಲೆ ಹರಿದು ರೋಗಿಗಳು ಮತ್ತಷ್ಟು ರೋಗಿಗೆ ತೊಂದರೆ ಅನುಭವಿಸುವಂತಾ ವಾತಾವರಣ ಜಿಲ್ಲಾಸ್ಪತ್ರೆಯಲ್ಲಿ ಕಾಣುವುದು ಸಾಮಾನ್ಯವಾದ ಮಾತಾಗಿದೆ.

ಭಾಕ್ಸ್

ಯುಜಿಡಿ ಘಟಕಗಳ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು.ಕೂಡಲೆ ಈ ಸಮಸ್ಯೆ ಬಗೆಹರಿಸುವಂತೆ ಪಾಲಿಕೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿ ಶೀಘ್ರವೇ ಒಳ ಚರಂಡಿ ನೀರು ರಸ್ತೆ ಮೇಲೆ ಹರಿಯದಂತೆ ಕ್ರಮ ಜರುಗಿಸಲಾಗುವುದು.

ಬಸವರಾಜ ಚಿಕ್ಕಲದಿನ್ನಿ

ಮೇಯರ್ ಮಹಾ ನಗರ ಪಾಲಿಕೆ

loading...