ಜೀವನದಲ್ಲಿ ಖುಷಿಯ ಪಾಠ ಯಾರೂ ಕಲಿಸುವದಿಲ್ಲ: ರಾಜಶೇಖರ ಪಾಟೀಲ

0
5
loading...

ಕನ್ನಡಮ್ಮ ಸುದ್ದಿ
ಚಿಕ್ಕೊಡಿ 27: ಜೀವನದಲ್ಲಿ ಯಶಸ್ವಿಯಾಗಬೇಕೆಂದರೇ ನಾವು ಖುಷಿಯಿಂದ ಕಾರ್ಯನಿರ್ವಹಿಸಬೇಕು. ನಮ್ಮ ಜೀವನದಲ್ಲಿ ಯಾರು ನಮಗೆ ಖುಷಿಯ ಪಾಠ ಕಲಿಸುವದಿಲ್ಲ ಎಂದು ಹುಬ್ಬಳ್ಳಿ ಹ್ಯಾಪಿ ಫೌಂಡೆಶನ್ ಸಂಸ್ಥಾಪಕ ರಾಜಶೇಖರ ಪಾಟೀಲ ಹೇಳಿದರು.
ಕೆಎಲ್‍ಇ ಇಂಜಿನೀಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಶಸ್ವಿ ಜೀವನದಲ್ಲಿ ಮಾನಸಿಕ ಶಕ್ತಿಯ ಅನ್ವೇಷಣೆ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ, ಮಾತನಾಡಿ, ಭವಿಷ್ಯತ್ತಿನ ಬಗ್ಗೆ ಚಿಂತಿಸದೇ, ಭೂತದಲ್ಲಿ ಸಂಭವಿಸಿದ್ದಕ್ಕೆ ಘಟನೆಗಳಿಗೆ ಕೊರಗದೇ ವರ್ತಮಾನದಲ್ಲಿ ಬದುಕಿದರೇ ಮಾತ್ರ ಖುಷಿಯಿಂದ ಬದುಕಲೂ ಸಾಧ್ಯ ಎಂದರು. ಇಂದು ಯುವ ಪಿಳಿಗೆ ಚಂಚಲತೆಯಿಂದ ಬಳಲುತ್ತಿದೆ. ಮೋಬೈಲ್ ಬಳಕೆ ಸಿಮಿತಗೊಳಿಸಿ ದಿನಾಲೂ ಅರ್ಧ ಗಂಟೆ ಧ್ಯಾನ ಅಭ್ಯಾಸ ಕೈಗೊಳ್ಳುವದರಿಂದ ಮಾನಸಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ . ಇಂದಿನ ಆಧುನಿಕ ತಾಂತ್ರಿಕ ಯುಗವು ಯುವಪಿಳಿಗೆಗೆ ವರ ಮತ್ತು ಶಾಪವಾಗಿ ಪರಿನಮಿಸಿದೆ. ಅಂತರ್ಜಾಲದ ಮುಖಾಂತರ ಎಲ್ಲ ಮಾಹಿತಿ ದೊರಕುವದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ. ಅದರ ಜೋತೆಗೆ ಸಾಮಾಜಿಕ ಜಾಲತಾಣಗಳು ಯುವಕರಲ್ಲಿ ಮಾನಸಿಕವಾಗಿ ವ್ಯಸನಿಗಳಾಗಿಸಿ ಅವರ ಸಾಮಥ್ರ್ಯವನ್ನು ಕುಗ್ಗಿಸಿದೆ ಎಂದರು. ಆದ್ದರಿಂದ ಆದ್ದರಿಂದ ಯುವಕರು ಅಂತರ್ಜಾಲವನ್ನು ಜಾನತನದಿಂದ ಬಳಸಲೂ ಸಲಹೆ ನೀಡಿದರು.
ಪ್ರೊ. ಸತೀಶ ಭೋಜನ್ನವರ ಸ್ವಾಗತಿಸಿದರು. ಚೈತ್ರಾ ಪಾಟೀಲ ಅಥಿತಿಯನ್ನು ಪರಿಚಯಿಸಿದರು. ಅರ್ಪಿತಾ ಅಥರ್ಗ ನಿರೂಪಿಸಿದರು. ಪ್ರೊ. ಜಯಶ್ರೀ ರೂಡಗಿ ವಂದಿಸಿದರು. ಈ ಕಾರ್ಯಕ್ರಮವನ್ನು ಪ್ರೊ. ಸುಭಾಷ ಮೇಟಿ ಸಂಯೋಜಿಸಿದರು.
..

loading...