ಜುಲೈ ೨೭ ರಂದು ಚಂದ್ರ ಗ್ರಹಣ ವೀಕ್ಷಣೆ ಸಿದ್ದತೆ:ಮೌಡ್ಯಕ್ಕೆ ಸೆಡ್ಡು ಹೊಡೆದ ಶಾಸಕ ಜಾರಕಿಹೋಳಿ.

0
29
loading...

ಜುಲೈ ೨೭ ರಂದು ಚಂದ್ರ ಗ್ರಹಣ ವೀಕ್ಷಣೆ ಸಿದ್ದತೆ:ಮೌಡ್ಯಕ್ಕೆ ಸೆಡ್ಡು ಹೊಡೆದ ಶಾಸಕ ಜಾರಕಿಹೋಳಿ.

ಕನ್ನಡಮ್ಮ ಸುದ್ದಿ-ಬೆಳಗಾವಿ: ಮೌಡ್ಯ ಕಂದಾಚಾರಗಳ ವಿರುದ್ಧ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಶಾಸಕ ಎಂದೆ ಕರೆಸಿಕೊಳ್ಳುವ ಮಾಜಿ ಸಚಿವ ಹಾಲಿ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಂದ ಬರುವ ಜು.೨೭ ರಂದು ಚಂದ್ರ ಗ್ರಹಣ ವೀಕ್ಷಣೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ .

ಚಂದ್ರಗ್ರಹಣ ಸಂಧರ್ಭದಲ್ಲಿ ಚಂದ್ರನನ್ನು ನೋಡಿದರೆ ಅಪಾವಾಗುತ್ತದೆ ಎಂಬ ಅಪ ನಂಭಿಕೆ ಹೋಗಲಾಡಿಸಲು ಶಾಸಕರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ .ಪ್ರಕೃತಿಯಲ್ಲಿ ಕೇಲವೊಂದು ಬದಲಾವಣೆ ನಡೆಯುತ್ತವೆ ಅವು ಪ್ರಕೃತಿ ದತ್ತವಾದವುಗಳು ಅವುಗಳನ್ನು ಮೌಡ್ಯಕ್ಕೆ ಬದಲಾಯಿಸಿ ಹೋಮ ಹವನ ಎಂದು ತಪ್ಪು ಸಂದೇಶ ನೀಡಲಾಗುತ್ತಿದೆ.ಇದನ್ನು ತೊಲಗಿಸಲು . ಈ ಕಾರ್ಯಕ್ರಮವು ಬೆಳಗಾವಿಯ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಚಿಂತಕರು ,ಸಾಹಿತಿಗಳು ಸೇರಿದಂತೆ ಮೌಡ್ಯದ ವಿರುದ್ಧ ಮನಸುಗಳು ಇಲ್ಲಿ ಸೇರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ .
ಹಲವು ವರ್ಷಗಳಿಂದ ಶಾಸಕ ಸತೀಶ ಜಾರಕಿಹೊಳಿ ಮೌಡ್ಯ ಸಂಪ್ರದಾಯ ಹೋಗಲಾಡಿಸಲು ಹಲವಾರು ಕಾರ್ಯಕ್ರಮ ಏರ್ಪಡಿಸುವ ಮೂಲಕ ರಾಜ್ಯಾದ್ಯಂತ ಹೆಸರು ವಾಸಿಯಾಗಿದ್ದಾರೆ .

loading...